ರಾಣೆಬೆನ್ನೂರ

ಆರ್‌ಟಿಇಎಸ್ ಕಾಲೇಜು: ಕೋಟಿ ಕಂಠ ಗಾಯನ

ಆರ್‌ಟಿಇಎಸ್ ಕಾಲೇಜು: ಕೋಟಿ ಕಂಠ ಗಾಯನ

ರಾಣೆಬೆನ್ನೂರು 30:  ನಗರ ಹೊರ ವಲಯದ, ರಾಣೆಬೆನ್ನೂರು ತಾಲೂಕ ಶಿಕ್ಷಣ ಸಂಸ್ಥೆಯ, ಕಲಾ ವಿಜ್ಞಾನ ಹಾಗೂ ವಾಣಿಜ್ಯ  ವಿದ್ಯಾಲಯದಲ್ಲಿ, ಎನ್‌.ಸಿಸಿ ಮತ್ತು ಎನ್ ಎಸ್ ಎಸ್ ಮತ್ತು ಐಕ್ಯೂಸಿ ಸಯೋಗದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೂಜಿಸಲಾಗಿತ್ತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾಹುಕಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ, ಸಿ. ಎ. ಹರಿಹರ, ಅವರು ಕನ್ನಡ ನಾಡು ನುಡಿ ಸಂಸ್ಕೃತಿ ಭಾಷೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ: ಸರಸ್ವತಿ ಬಮ್ಮನಾಳ, ಅವರು ಸಂಕಲ್ಪ ವಿಧಿ ಬೋಧಿಸಿದರು. ಉಪನ್ಯಾಸಕರಾದ ಡಿ.ವ್ಹಿ.ಜಂಗಣ್ಣವರ್, ಪಿ.ಬಿ.ಕೊಪ್ಪದ, ಎಸ್‌ಎನ್ ಮುನಾವರಲಿ ಖಾನ್, ಎಲ್ ಎಮ್ ಮಾವಿನತೋಪ, ಮೇಘರಾಜ ಕೊರಚರ, ಸಿ. ಎನ್‌.ಪೂಜಾರ್, ಡಿ.ಟಿ.ಲಮಾಣಿ, ರಮೇಶ್ ಎನ್‌. ಜಿ, ಅಂಜನಾ ಪವಾರ್, ಕವಿತಾ ಎನ್, ಸುಷ್ಮಾ, ಪ್ರಗತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನನ್ನ ನಾಡು ನನ್ನ ಹಾಡು ಧ್ಯೇಯ ವಾಕ್ಯದಲ್ಲಿ ಆರಂಭಗೊಂಡ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಹಾಡಿ ಸಾರ್ವಜನಿಕರ ಮನರಂಜಿಸಿದರು. 


ಸುದ್ದಿ ಓದಿ