ಕೋನಿಕಾ ಯಲಿಗಾರ ಎಂಬಿಬಿಎಸ್ ಕೋರ್ಸಗೆ ಆಯ್ಕೆ
ಶಿಗ್ಗಾವಿ 26 : ಪಟ್ಟಣದ ಫೀನೀಕ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯಾದ ಕು. ಕೋನಿಕಾ ಯಲಿಗಾರ ವಿದ್ಯಾರ್ಥಿನಿಯು 2024-25 ನೇ ಸಾಲಿನ ಎಂಬಿಬಿಎಸ್ ಕೋರ್ಸಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನ ಫೀನೀಕ್ಸ್ ಸಮೂಹ ಸಂಸ್ಥೆಯ ವತಿಯಿಂದ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಉಪಾದ್ಯಕ್ಷ ನರಹರಿ ಕಟ್ಟಿ, ಒಂದು ಶಿಕ್ಷಣ ಸಂಸ್ಥೆಗೆ ಗೌರವ ಸಿಗುವುದು ಆ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಹೋದಾಗ ಜೊತೆಗೆ ಗೌರವ ಸಿಕ್ಕಾಗ ಆ ಗೌರವ ನಮ್ಮ ಸಂಸ್ಥೆಗೆ ಇಂದು ಸಿಕ್ಕಿದೆ, ಸದಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮತ್ತು ಅವರ ಸರ್ವತೋಮುಖ ಜೀವನಕ್ಕೆ ಸಂಸ್ಥೆ ಉತ್ತಮ ಯೋಜನೆಗಳನ್ನ ರೂಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದೇ ಇದಕ್ಕೆ ಕಾರಣ, ಜೊತೆಗೆ ನುರಿತ ಶಿಕ್ಷಕರ ಮಾರ್ಗದರ್ಶನ ನೀಡಲಾಗುತ್ತಿದೆ ಇದಕ್ಕೆ ಆಡಳಿತ ಮಂಡಳಿಯ ಸಹಕಾರ ಬಹಳಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ಎಂ ತಿರ್ಲಾಪೂರ, ಪ್ರಾಚಾರ್ಯ ಮಂಜುನಾಥ ಕೆ ಎಚ್, ವಿದ್ಯಾರ್ಥಿನಿಯ ತಂದೆ ಕೋಟೆಪ್ಪ ಯಲಿಗಾರ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.