ರಾಣೆಬೆನ್ನೂರ

ರಾಣೀಬೆನ್ನೂರಿನಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಕೋಮಲ್ ಪಾಟೀಲ

ರಾಣೀಬೆನ್ನೂರಿನಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಕೋಮಲ್ ಪಾಟೀಲ

ರಾಣೀಬೆನ್ನೂರು 20:  ಯುವಕರಲ್ಲಿ ದೇಶಭಕ್ತಿ ಜಾಗೃತಿ ಗೊಳಿಸಲು ಖಿನ್ನತೆ ಹೋಗಲಾಡಿಸಲು ರಸ್ತೆ ಸುರಕ್ಷತಾ ಕ್ರಮ ತಿಳುವಳಿಕೆ ಮೂಡಿಸಲು ರಾಣೀಬೆನ್ನೂರಿನಿಂದ ಕಾಶ್ಮೀರಕ್ಕೆ ಬೈಕ್ ಮೇಲೆ ಸಾಹಸ ಯಾತ್ರೆ ಕೈಗೊಂಡಿದ್ದ ಕೋಮಲ್ ಪ್ರಭುಗೌಡ ಪಾಟೀಲರವರು ಯಶಸ್ವಿಯಾಗಿ ಕಾಶ್ಮೀರವನ್ನು ತಲುಪಿ ಯಾತ್ರೆಯ ಗುರಿಯನ್ನು ಸಾಧಿಸಿ ವಾಪಾಸು ದಿ:17 ರಂದು ದೆಹಲಿ ತಲುಪಿರುತ್ತಾರೆ.  

ದೆಹಲಿಯಿಂದ ತಮ್ಮ ಪ್ರಯಾಣವನ್ನು ಮುಂದುವರೆ ಸಿರುವ ಕೋಮಲ್‌ರವರು ಇನ್ನು ಒಂದು ವಾರದಲ್ಲಿ ತಮ್ಮ ಯಾತ್ರೆ ಪರಿಪೂರ್ಣಗೊಳಿಸಿ ರಾಣೀಬೆನ್ನೂರು ನಗರಕ್ಕೆ ಆಗಮಿಸಲಿದ್ದಾಳೆಂದು ತಂದೆ ಪ್ರಭುಗೌಡ ಪಾಟೀಲ ಮಾಧ್ಯಮಕ್ಕೆ ತಿಳಿಸಿದ್ದಾರೆ. 


ಸುದ್ದಿ ಓದಿ