ಸಿಂಧಗಿ

ಕೊಲ್ಕತ್ತಾ ಪ್ರಕರಣ, ಕೊಪ್ಪಳ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ: ಮನವಿ

ಕೊಲ್ಕತ್ತಾ ಪ್ರಕರಣ, ಕೊಪ್ಪಳ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ: ಮನವಿ

ಸಿಂದಗಿ 22: ಕೊಪ್ಪಳ ಜಿಲ್ಲೆಯ ದಲಿತ ಯುವಕನ ಹತ್ಯೆ ಮತ್ತು ಕೊಲ್ಕತ್ತಾ ವೈದ್ಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದಲಿತ ಸೇನೆವತಿಯಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳೀಗೆ ತಹಶೀಲ್ದಾರ ಮೂಲಕ ಶಿರಸ್ತದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು. 

ಮಹಿಬೂಬ ಸಿಂದಗಿಕರ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗ ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಕೊಲೆ ಸುಲಿಗೆ ಹೆಚ್ಚಾಗಿದ್ದು. ಭಾರತ ಸಂವಿಧಾನದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಕಾನೂನುಗಳು ಇದ್ದರೂ ಇನ್ನೂ ಸಹ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಮೊನ್ನೆ ಆಗಸ್ಟ್‌ 18ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕನನ್ನು ಹೇರ್ ಕಟ್ ಮಾಡಲು ನಿರಾಕರಿಸಿ ಕತ್ರಿ ಇರಿದು ಕೊಲೆ ಮಾಡಿರುವ ಘಟನೆ... 

ಕೇಂದ್ರ ಸರ್ಕಾರ ಇವತ್ತು ಭೇಟಿ ಬಚಾವೋ ಬೇಟಿ ಪಢಾವೋ ಎಂಬ ಯೋಜನೆಗಳನ್ನು ಜಾರಿ ಮಾಡಿ ಇವತ್ತು ಪ್ರತಿ 15 ನಿಮಿಷಕ್ಕೊಮ್ಮೆ ಭಾರತ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಕೊಲೆಗಳು ಆಗುತ್ತಿವೆ. ಇದನ್ನು ಖಂಡಿಸಿ ದಲಿತ ಸೇನೆ ಸಿಂದಗಿ ತಾಲೂಕ ಸಮಿತಿ ವತಿಯಿಂದ ಬೃಹತ್ ಮೆರವಣಿಗೆ ಮೂಲಕ ಸಿಂದಗಿ ತಾಲೂಕ ದಂಡಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವಿಕೃತ ಕೃತ್ಯ ಎಸಗಿರುವ ಆರೋಪಿಗಳನ್ನು ಅತ್ಯಂತ ಕಠಿಣ ಶಿಕ್ಷೆಗೊಳ್ಳ ಪಡಿಸಲು ಆಗ್ರಹಿಸಿ ತಾಲೂಕ ದಂಡಾಧಿಕಾರಿಗಳು ಸಿಂದಗಿ ಇವರ ಮುಖಾಂತರ ರಾಷ್ಟ್ರ್ಟ್ರಪತಿಗಳಿಗೆ ಹಾಗೂ ಗೃಹ ಸಚಿವರು ಕರ್ನಾಟಕ ಸರ್ಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು... 

ಪ್ರತಿಭಟನೆಯಲ್ಲಿ ದಲಿತ ಸೇನೆ ತಾಲೂಕ ಅಧ್ಯಕ್ಷ ಬಾಲಕೃಷ್ಣ ಚಲವಾದಿ ಯುವ ಹೋರಾಟಗಾರ ರವಿ ಹೋಳಿ ದಲಿತ ಸೇನೆ ತಾಲೂಕು ಉಪಾಧ್ಯಕ್ಷ ಸಾಹು ಬುಕ್ಕದ್ ಮಹಿಳಾ ಅಧ್ಯಕ್ಷ ಸಫಿಯಾ ಶೇಕ್  ಜಾಫರ್ ಇನಾಮ್ದಾರ್  ಮೊಹಮ್ಮದ್ ಅಲಂದ್ ಸುಮಿತ್ ಕಕ್ಕಸ್ಕೇರಿ ಅಂಬರೀಶ್ ಕೊಂಡಗುಳಿ ಫಿರೋಜ್ ನಿಂಬರ್ಗಿ ಫಯಾಜ್ ಕಣಂರ್ಚಿ ಇನ್ನೂ ಅನೇಕ ಜನ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ