ಶಿಗ್ಗಾವ್

ಕಿತ್ತೂರ ಚೆನ್ನಮ್ಮಾಜಿಯ ಸಾಹಸ ಶೌರ್ಯ ಇಂದಿನ ಯುವಜನತೆಗೆ ಪ್ರೇರಣೆ

ಕಿತ್ತೂರ ಚೆನ್ನಮ್ಮಾಜಿಯ ಸಾಹಸ ಶೌರ್ಯ ಇಂದಿನ ಯುವಜನತೆಗೆ ಪ್ರೇರಣೆ

ಲೋಕದರ್ಶನ ವರದಿ 

ಶಿಗ್ಗಾವಿ 21:  ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯು ಈ ನಾಡಿನ ವೀರ ಮಹಿಳೆಯರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದಾರೆ. ಒಬ್ಬ ಮಹಿಳೆಯು ದೈತ್ಯ ಬ್ರಿಟೀಷ ಸೈನ್ಯವನ್ನು ಸೆದೆಬಡಿದು ನಾಡನ್ನುರಕ್ಷಣೆ ಮಾಡಿರುವುದು ಇತಿಹಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


ಪಟ್ಟಣದ ತಾಲೂಕ ಕ್ರಿಡಾಂಗಣದಲ್ಲಿ ರಂಗಾಯಣ ಧಾರವಾಡ ಇವರು ಆಯೋಜನೆ ಮಾಡಿದ್ದ 3 ನೇ ದಿನದ ಮುಕ್ತಾಯ ಸಮಾರಂಭದ 25 ನೇ ಪ್ರಯೋಗದ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವದರ ಮೂಲಕ ಚಾಲನೆ ನೀಡಿ  ಮಾತನಾಡಿದರು 

        ವೀರರಾಣಿ ಕಿತ್ತೂರ ಚೆನ್ನಮ್ಮ ಬ್ರಹತ್ತ ನಾಟಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದಅವರು ಈ ನಾಡಿನ ಗತವೈಭವವನ್ನು ಜೀವಂತವಾಗಿ ನೋಡುವ ಅವಕಾಶ ಶಿಗ್ಗಾಂವ ಸವಣೂರ ಜನತೆಗೆ ದೊರೆತಿರುವದು ನಮ್ಮೆಲ್ಲರ ಸೌಭಾಗ್ಯ ಚೆನ್ನಮ್ಮಾಜಿಯ ಬಗ್ಗೆ ಯಾರುಕೂಡಾ ಹೇಳುವ ಅವಶ್ಯಕತೆಇಲ್ಲ ಈ ನಾಡಿನ ಪ್ರತಿಯೊಬ್ಬರಿಗೂ ಕಿತ್ತೂರಿನ ಚೆನ್ನಮ್ಮಾಜಿಯ ಇತಿಹಾಸಗೊತ್ತಿದೆ ಮಾತೆಯ ವೀರ ಶೌರ್ಯತೆಯು ಎಲ್ಲರಿಗೂ ಮಾದರಿಯಾಗಿರುವುದು. 

ಮಲ್ಲಸಜ್ಜನ ದೊರೆಯ ನಂತರ ಬ್ರಿಟೀಷ್ ಸಾಮ್ರಾಜ್ಯ ತನ್ನ ಹಿಡಿತವನ್ನು ಸ್ಥಾಪನೆ ಮಾಡುವ ಪ್ರಯತ್ನ ಮಾಡಿತುಆದರೆಒಬ್ಬ ಮಹಿಳೆ ಆ ಬ್ರಿಟಿಷ್ ಸೈನ್ಶವನ್ನು ಸೆದೆಬಡಿಯಬಹುದು ಎಂಬ ಊಹೆ ಯಾರಿಗೂ ಇರಲಿಲ್ಲ ಆದರೆ ಚೆನ್ನಮ್ಮಾಜಿಯು ತನ್ನ ಸಾಹಸ ಶೌರ್ಯದಿಂದ ಇಡಿ ಬ್ರಿಟಿಷ್ ಅಧಿಕಾರಿಗಳ ಕನಸ್ಸನ್ನು ನುಚ್ಚು ನೂರು ಮಾಡಿದಳು ಇದರ ಹಿಂದೆ ಸಂಗೊಳ್ಳಿ ರಾಯಣ್ಣ ಅಮಟೂರ ಬಾಳಪ್ಪರಂತಹ ಶೂರರು ಚೆನ್ನಮ್ಮಾಜಿಯ ಬೆನ್ನಿಗೆ ನಿಂತು ಬ್ರಿಟಿಷರಿಂದ ನಾಡನ್ನು ಉಳಿಸಿಕೊಳ್ಳಲು ಪಣತೊಟ್ಟರು. ಕಿತ್ತೂರ ಚೆನ್ನಮ್ಮಾಜಿಯ ಆಡಳಿತದಲ್ಲಿ ಬ್ರಿಟಿಷರ್ ರೀತಿ ದೊಡ್ಡ ಸೈನ್ಯವಿಲ್ಲದಿದ್ದರೂ ಮಾನಸಿಕವಾಗಿ ಸದೃಢವಾಗಿದ್ದಳು ಅಂತಹ ಸಾಹಸಮಯ ಬದುಕುಯಾರಿಗೂ ಬರಲು ಸಾಧ್ಯವಿಲ್ಲ. 

ಇಂತಹ ಚೆನ್ನಮ್ಮಾಜಿಯ ಶೌರ್ಯದ ಅನೇಕ ಘಟನೆಗಳನ್ನು ಆಧರಿಸಿ ಧಾರವಾಡದ ರಂಗಾಯಣದ ಕಲಾವಿದರಿಂದ ವೀರರಾಣಿ ಕಿತ್ತೂರ ಚೆನ್ನಮ್ಮಾಜಿಯ ಬ್ರಹತ್ತ ನಾಟಕ ಕಿತ್ತೂರಿನ ಇತಿಹಾಸವನ್ನು ಜನರಿಗೆ ತಿಳಿಯಪಡಿಸುತ್ತಿರುವುದು ಹೆಮ್ಮೆಯ ವಿಷಯ ಈ ನಾಟಕದ ಹಿಂದೆ ರಂಗಾಯಣದ ನಿರ್ಧೇಶಕ ರಮೇಶ ಪರವಿನಾಯಕರ ಶ್ರಮ ಶ್ಲಾಘನೀಯ ಅವರಿಗೆ ಹಾಗೂ ಕಲಾವಿದರಿಗೆ ಅಭಿನಂದನೆಗಳು. ಈ ನಾಟಕದ ಹಿಂದೆ ಸಾಕಷ್ಟು ಶ್ರಮಇದೆ ಆ ಶ್ರಮ ಇಂದು ನಾಟಕದ ಪ್ರದರ್ಶನದ ಮುಲಕ ನಮ್ಮಗೆಲ್ಲರಿಗೂ ತಿಳಿಯುತ್ತಿದೆ  

ಇಂಥಹ ಕಿತ್ತೂರಿನ ಇತಿಹಾಸವನ್ನು ಉಳಿಸಲು ನಮ್ಮ ಸರಕಾರ ಕಿತ್ತೂರು ಕೋಟೆ ಮರು ಸ್ಥಾಪಿಸಲು 50 ಕೋಟಿರೂ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಬಂದಿರುವದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರಾಣೆಬೆನ್ನೂರ ಶಾಸಕ ಅರುಣ ಪೂಜಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೋಪ್ಪ,  ಗುತ್ತಿಗೆದಾರರ ಸಂಘದ ತಾಲೂಕಾ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ವಾಯುವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ತಿಪ್ಪಣ್ಣಾ ಸಾತಣ್ಣವರ, ಕಿರಣ ಅವರಾದಿ, ಹರಿಹರ ಪಂಚಮಸಾಲಿ ಪೀಠದ ಅಧ್ಯಕ್ಷ ವಿರೇಶ ಅಜೂರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕ ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ