ದುಂಡಶಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಖುತೇಜಾಬಿ, ಉಪಾಧ್ಯಕ್ಷರಾಗಿ ವಿದ್ಯಾಶ್ರೀ ಆಯ್ಕೆ
ಶಿಗ್ಗಾವಿ 30: ತಾಲೂಕಿನ ದುಂಡಶಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಖುತೇಜಾಬಿ ಖಾದರಗೌಸ ಜಮಾದಾರ, ಉಪಾಧ್ಯಕ್ಷರಾಗಿ ವಿಧ್ಯಾಶ್ರೀ ಬಾಹುಬಲಿ ಅಕ್ಕಿ ಅವಿರೋದವಾಗಿ ಆಯ್ಕೆಯಾದರು ಎಂದು ತಾ.ಪಂ.ಇಓ ಹಾಗೂ ಚುನಾವಣಾಧಿಕಾರಿ ಪ್ರಶಾಂತ ತುರ್ಕಾಣಿ ಘೋಷಣೆನ್ನು ಮಾಡಿದರು. ತಾಲೂಕಿನ ದುಂಡಶಿ ಗ್ರಾಮ ಪಂಚಾಯತವು 11 ಸದಸ್ಯರ ಬಲವನ್ನು ಹೊಂದಿದ್ದು ಅಧ್ಯಕ್ಷ ಸ್ಥಾನಕ್ಕೆ ಖುತೀಜಾಬಿ ಖಾದರಗೌಸ ಜಮಾದಾರ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಿಧ್ಯಾಶ್ರೀ ಬಾಹುಬಲಿ ಅಕ್ಕಿ ಒಂದೋಂದು ನಾಮಪತ್ರ ಸಲ್ಲಿಸಿದ್ದರು, ಆದ್ದರಿಂದ ಅವಿರೋಧ ಆಯ್ಕೆಯಾಗಿದೆ.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಅದ್ಯಕ್ಷರಾದ ಈರಣ್ಣಾ ವಾಲಿಶೆಟ್ಟರ ಮಾತನಾಡಿ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಅಭಿನಂದನೆಗಳು ಅಲ್ಲದೆ ಆಡಳಿತವನ್ನು ಸದಸ್ಯರ ಸಾರ್ವಜನಿಕರಿಗೆ ಸರಕಾರಿ ಯೋಜನೆಗಳು ಜನಸಾಮನ್ಯರಿಗೆ ಮುಟ್ಟುವಂತೆ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುವದರ ಜೋತೆಗೆ ಸದಸ್ಯರನ್ನು ಗಣನೆಗೆ ತೆಗದುಕೊಂಡು ಹೋಗಬೇಕು ಎಂದರು. ಬಸವಣ್ಣೆಯ್ಯ ಹಿರೇಮಠ, ಸದಸ್ಯರಾದ ದಾಮ್ಲಪ್ಪ ರಾಠೋಡ, ಮಹ್ಮದರಫೀಕ್ ಹಜರೇಸಾಬ ಶಿರಗೋಡ, ರಾಮಪ್ಪ ಹರಕುಣ್ಣಿ, ರೇಣುಕಾ ಮುಳಗುಂದ, ಸವಿತಾ ತಳವಾರ, ನೀಲವ್ವ ಹರಿಜನ, ಹಸೀನಾಬೇಗಂ ಹೊಸೂರ, ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಚುನಾಣಾಧಿಕಾರಿ ತಾ.ಪಂ ಇಓ ಪ್ರಶಾಂತ ತುರ್ಕಾಣಿ, ಸುರೇಶ ತೆಗ್ಗೆಳ್ಳಿ, ಪಿಡಿಒ ಪೂರ್ಣಿಮಾ ವಿ, ಚುನಾವಣೆಯಲ್ಲಿ ಇದ್ದರು.