ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರಿಬ್ಬರ ಸಾವು!
ಅಳಪ್ಪುಳ, ಡಿಸೆಂಬರ್ 08: ಕೇರಳದಲ್ಲಿ ಮಂಗಳವಾರ ನಡೆದ
ಮೊದಲ ಹಂತದ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮತ ಚಲಾಯಿಸಲು ಬಂದ ಇಬ್ಬರು ಮತದಾರರು ಎರಡು ಪ್ರತ್ಯೇಕ
ಮತದಾನ ಕೇಂದ್ರಗಳಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಹರಿಪಾಡ್ನ ಮಹಾದೇವಕ್ಕಾಡು ಬಳಿಯ ಎಸ್ಎನ್ಡಿಪಿ ಎಚ್ಎಸ್ಎಸ್ನಲ್ಲಿ ಮತದಾನ ಕೇಂದ್ರದಲ್ಲಿ ಓರ್ವ ಮೃತಪಟ್ಟಿದ್ದು, 62 ವರ್ಷ ವಯಸ್ಸಿನ ಬಾಲನ್ ಎಂದು ಗುರುತಿಸಲಾಗಿದೆ.
ಇದೇ ರೀತಿಯ ಮತ್ತೊಂದು ಘಟನೆ ಪಥನಮತ್ತಟ್ಟಾ ಜಿಲ್ಲೆಯ ರಾನ್ನಿಯಲ್ಲಿ ನಡೆದಿದ್ದು, ಮೃತರನ್ನು 90 ವರ್ಷ ವಯಸ್ಸಿನ ಮಾಥಾಯಿ ಎಂದು ಗುರುತಿಸಲಾಗಿದೆ.
ಮತ ಚಲಾಯಿಸಿದ ಬಳಿಕ ಮೂರ್ಛೆ ಹೋಗಿ ಆ ಬಳಿಕ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.