ಎಂ.ಸಿ.ಎ ವಿಭಾಗದಲ್ಲಿ ಮೂರು ಚಿನ್ನದ ಪದಕಗಳಿಗೆ ಭಾಜನಳಾದ ಕೀರ್ತಿ ಬಾರಕೇರ
ಶಿಗ್ಗಾವಿ 26: ತಾಲೂಕಿನ ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಆರ್.ಆರ್. ಬಾರಕೇರ್ ಮಗಳಾದ ಕೀರ್ತಿ ಬಾರಕೇರ 2023-24 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಎಂ.ಸಿ.ಎ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಕೀರ್ತಿ ಆರ್ ಬಾರಕೇರ ಮಾತನಾಡಿ ನನ್ನ ಸಾಧನೆಯ ಹಿಂದೆ ನನ್ನ ತಾತನವರಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ ದಾನಪ್ಪಾ ಕಬ್ಬೇರ ಮತ್ತು ಅಜ್ಜಿಯವರ ಪ್ರೋತ್ಸಾಹ ಶಿಕ್ಷಕರಾಗಿರುವ ನಮ್ಮ ತಂದೆ ಆರ್.ಆರ್. ಬಾರಕೇರ್ ಮತ್ತು ತಾಯಿಯವರ ನಿರಂತರ ಮಾರ್ಗದರ್ಶನ ಕಾರಣವಾಗಿದ್ದು, ಇನ್ನು ಕೆಲವು ವರ್ಷಗಳಕಾಲ ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಂತರ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸುವ ಇಂಗಿತವಿದೆ ಎಂದು ಹೇಳಿದರು.
ಆರ್.ಆರ್. ಬಾರಕೇರ್ ಮಾತನಾಡಿ ಮಗಳ ಸಾಧನೆಯಿಂದ ಬಹಳಷ್ಟು ಸಂತೋಷವಾಗಿದ್ದು, ಒಬ್ಬ ಪಾಲಕನಾಗಿ ಮಗಳಿಗೆ ಮೊದಲಿನಿಂದಲೂ ಗ್ರಂಥಾಲಯದ ಗೀಳು ಹಚ್ಚಿಕೊಳ್ಳುವಂತೆ ಮತ್ತು, ತರ್ಕಕ್ಕೆ ಸಿಗದ ವಿಷಯಗಳನ್ನು ತಜ್ಞೆರೊಂದಿಗೆ ಸಮಾಲೋಚಿಸುವ ಮನೋಭಾವವನ್ನು ಬೆಳಸುಲು ಪ್ರಯತ್ನಿಸುತ್ತಾ ಬಂದಿದ್ದು, ಅದರಂತೆ ಮಗಳು ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುತ್ತಿದ್ದಳು. ವಿದ್ಯಾರ್ಥಿಗಳಿಗೆ ಪಾಲಕರು ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕರೆ ಮತ್ತು ವಿದ್ಯಾರ್ಥಿಗಳು ತಮ್ಮ ಕುಟುಂಬದ ಹಿರಿಯರ ಮಾರ್ಗದರ್ಶನವನ್ನು ಸ್ವೀಕರಿಸಿದರೆ ಏನುಬೇಕಾದರು ಸಾಧಿಸಬಹುದು ಎಂಬುವುದಕ್ಕೆ ಉದಾಹರಣೆಯಾಗಿದ್ದಾಳೆ ಎಂದರು.