ಪತ್ರಕರ್ತ ಮಹಾಂತೇಶಗೆ ಕಾಯಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೈಲಹೊಂಗಲ 26: ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಕನ್ನಡ ಜಾನಪದ ಪರಿಷತ್ತಿನ್ ಮಾಧ್ಯಮ ವಕ್ತಾರ, ಪತ್ರಕರ್ತ ಮಹಾಂತೇಶ ಮಲ್ಲಪ್ಪ ರಾಜಗೋಳಿ ಅವರಿಗೆ ಕಾಯಕ ಸೇವಾ ರತ್ನ ಪ್ರಶಸ್ತಿ ಲಭಿಸಿದೆ.
ರಾಮದುರ್ಗ ತಾಲೂಕಿನ ಸುಕ್ಷೇತ್ರ ಚಿಪ್ಪಲಕಟ್ಟಿಯ ಜಗದ್ಗುರು ರೇಣುಕಾಚಾರ್ಯ ದೇವಸ್ಥಾನದ ಆಶ್ರಯದಲ್ಲಿ ಪ್ರತಿ ವರ್ಷ ಕೊಡ ಮಾಡುವ ಕಾಯಕ ಸೇವಾ ರತ್ನ ಪ್ರಶಸ್ತಿಯನ್ನು ಪತ್ರಿಕಾ ರಂಗದ ಸೇವೆ ಮತ್ತು ಸಮಾಜ ಸೇವೆ ಪರಿಗಣಿಸಿ ಪ್ರಸುತ್ತ ಸಾಲಿನಲ್ಲಿ ಮಹಾಂತೇಶ ರಾಜಗೋಳಿ ಅವರಿಗೆ ರವಿವಾರ ಚಿಪ್ಪಲಕಟ್ಟಿಯಲ್ಲಿ ನಡೆದ ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಜಾತ್ರಾ ಮಹೋತ್ಸವದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲ್ಮೇಶ್ವರ ಸ್ವಾಮೀಜಿ, ಈರಯ್ಯಸ್ವಾಮಿ ಹಿರೇಮಠ, ವೀರೇಶ ದೇವರು, ಬಸವರಾಜ ಹೊಂಗಲ, ಉಮೇಶ ಹಿರೇಮಠ, ಅನೇಕರು ಇದ್ದರು.