ಪಂಚಾಯತ್ ಅಭಿವೃದ್ಧಿಗೆ ಕವಟಗಿಮಠ ಗೆಲುವು ಮುಖ್ಯ: ಹುಂಡೇಕರ
ಲೋಕದರ್ಶನ ವರದಿ
ಚಿಕ್ಕೋಡಿ 05: ಗಡಿ ಭಾಗದಲ್ಲಿ ಇರುವ ಗ್ರಾಮ ಪಂಚಾಯತ್ ಅಭಿವೃದ್ಧಿಯಾಗಬೇಕಾದರೇ ಬಿಜೆಪಿ ಅಭ್ಯರ್ಥಿ ಹಾಗೂ ನನ್ನ ತಂದೆ ಮಹಾಂತೇಶ ಕವಟಗಿಮಠ ಗೆಲುವು ಮುಖ್ಯವಾಗಿದೆ ಎಂದು ಡಾ. ಪೂಜಾ ಹುಂಡೇಕರ ಹೇಳಿದರು.
ಶನಿವಾರ ತಾಲೂಕಿನ ನಿಪ್ಪಾಣಿ ಮತಕ್ಷೇತ್ರದಲ್ಲಿ ವಿವಿಧ ಗ್ರಾಮ ಪಂಚಾಯತಿಗಳಿಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು. ಕಳೆದ ಏಳು ವರ್ಷದ ಬಿಜೆಪಿ ಆಡಳಿತ ಅವದಿಯಲ್ಲಿ ಗ್ರಾಮೀಣಾವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ನಾಯಕರಾದ ಯಡಿಯೂರ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನನ್ನ ತಂದೆಯವರಾದ ಮಹಾಂತೇಶ ಕವಟಗಿಮಠ ಸ್ಥಳೀಯ ಸಂಸ್ಥೆಯ ಬಲವರ್ಧನೆಗೆ ಪ್ರಯತ್ನಿಸಿದ್ದಾರೆ ಎಂದರು.
ಪುರಸಭೆ ಸದಸ್ಯೆ ವೀಣಾ ಜಗದೀಶ ಕವಟಗಿಮಠ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಅಧ್ಯಕ್ಷ ಶಾಂಭವಿ ಅಶ್ವಥಪೂರ, ಗೀತಾ ಮಹೇಶ ಭಾತೆ ಮುಂತಾದವರು ಇದ್ದರು.