ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಅಭಿನಂದನಾ ಸನ್ಮಾನ
ಲೋಕದರ್ಶನ ವರದಿ
ರಾಣೇಬೆನ್ನೂರು 24: ಚುನಾವಣೆಗಳು ಬರುತ್ತವೆ ಹೂಗುತ್ತವೆ, ಆದರೆ ಯಾರೇ ಅಧಿಕಾರ ಸ್ಥಾನವನ್ನು ಹೂಂದಿದರೂ ಉದ್ದೇಶಿತ ಯೋಜನೆ ಜೊತೆಗೆ ಪರಿಪೂರ್ಣ ಯೋಚನೆಯನ್ನು ಮಾಡುವುದರ ಮೂಲಕ ಕೇಂದ್ರ ಕನ್ನಡ ಸಾಹಿತ್ಯೆ ಪರಿಷತ್ತಿನ ಮೂಲ ಉದ್ದೇಶಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದಾಗ ಮಾತ್ರ ಪ್ರತಿಯೊಬ್ಬರು ಆತ್ಮ ಸಂತೋಷ ಹೊಂದಲು ಸಾಧ್ಯವಾಗುವುದು ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪುನರ್ ಆಯ್ಕೆಗೂಂಡ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಅವರು ಸೋಮವಾರ ಸಂಜೆ ಇಲ್ಲಿನ ಅಶೋಕ ನಗರದ ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿ ಆಯೋಜಿಸಿದ್ದ ನೂತನ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ ಅವದಿಯಲ್ಲಿ ತಮ್ಮೇಲ್ಲರ ನೀರೀಕ್ಷೆ ಮತ್ತು ಅಪೇಕ್ಷೆಯಂತೆ ಕನ್ನಡದ ಕಟ್ಟಾಳುವಾಗಿ ಎಲ್ಲರನ್ನು ಎಲ್ಲ ಸಮುದಾಯದ ಅಜೀವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೂಂಡು ಕೆಲಸ ಮಾಡಿದ ತೃಪ್ತಿ ನನಗಿದೆ. ಅದರ ಯಶಸ್ವಿಗೆ ಪ್ರತಿಯೊಬ್ಬರು ಕಾರಣರಾಗಿದ್ದಾರೆ. ಕೈ ತಪ್ಪಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪುನಃ ತರಲು ಪ್ರಯತ್ನಿಸಿದ್ದೇವೆ. ಸಮ್ಮೇಳನ ನಡೆದಿದ್ದರೆ ನಾನು ಸ್ಪಧಿಸುವ ಅವಶ್ಯಕತೆ ಇರಲಿಲ್ಲ ಅದಕ್ಕಾಗಿ ಎಲ್ಲರ ಅಪೇಕ್ಷೆಯಂತೆ ಸ್ಪರ್ದೆ ಮಾಡಬೇಕಾಯಿತು ಎಂದರು.
ಕಾರ್ಯಕರ್ತರು ಮತ್ತು ಅಜೀವ ಸದಸ್ಯ ಮತದಾರ ಬಂದುಗಳು ತಮ್ಮ ಮೇಲೆ ಅಪಾರವಾದ ಅಭಿಮಾನ ಮತ್ತು ವಿಶ್ವಾಸವಿಟ್ಟು ನನಗೆ ಪುನಃ ಮತ ನೀಡಿ ಸಮ್ಮೇಳನ ನಡೆಸಲು ಅವಕಾಶ ನೀಡಿದ್ದಾರೆ. ಅದಕ್ಕಾಗಿ ತಾವು ಜಿಲ್ಲೆಯ ಘಟಕದ ಮತ್ತು ಎಲ್ಲ ಕಾರ್ಯಕರ್ತರ ಪರವಾಗಿ ಎಲ್ಲ ಕನ್ನಡದ ಮನಸ್ಸುಗಳಿಗೆ ಹೃದಯ ತುಂಬಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಲಿಂಗಯ್ಯಾ ಅವರು ಸ್ಪರ್ದೆ ಚುನಾವಣೆಗೆ ಮಾತ್ರ ಮೀಸಲಾಗಲಿ. ಕನ್ನಡ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ಯಾವುದೇ ಭೇಧ, ಭಾವ, ಜಾತಿ, ಮತ, ಪಂತ, ಎಣಿಸದೆ ಸಮ್ಮೇಳನ ಯಶಸ್ವಿಗೆ ಎಲ್ಲರೂ ಕೈ ಜೊಡಿಸಿ ನಾ, ಭೂತೂ, ನಾ ಭವಿಷ್ಯತೂ ಎನ್ನುವ ರೀತಿಯಲ್ಲಿ ಜಿಲ್ಲೆಯ ಹೆಸರನ್ನು ತರಲು ಮುಂದಾಗಬೇಕು ಎಂದು ಕರಗಳನ್ನು ಜೊಡಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷೆ ಎ.ಬಿ. ರತ್ನಮ್ಮ, ಎಂ.ಜಿ. ಬಡಪ್ಪನವರ, ಗಣೇಶ ದೇವಗಿರಿಮಠ, ಬಿ.ಪಿ. ಶಿಡೇನೂರ, ಬಸವರಾಜ ಪಾಟೀಲ, ನಿತ್ಯಾನಂದ ಕುಂದಾಪುರ, ಸಂಜೀವ್ ಶಿರಹಟ್ಟಿ, ಕೆ.ಸಿ.ನಾಗರಜ್ಜಿ, ಪ್ರಕಾಶ ಜೋತಿ, ಹನುಮಂತಪ್ಪ ಕಬ್ಬಾರ, ವಿಜಯ ಜಂಬಗಿ, ಹೆಚ್.ಜಿ. ಹುಚಗೂಂಡರ, ಡಾಽಽ ಕೆ,ಹೆಚ್. ಮುಕ್ಕಣ್ಣನವರ, ಸೋಮಲಿಂಗಪ್ಪ ಚಿಕ್ಕಳ್ಳವರ, ಪ್ರಮೋದ ಹಲವಾಗಲ, ವೈ.ಟಿ ತಳವಾರ, ಎಂ.ಡಿ. ದ್ಯಾಮಣ್ಣನವರ, ರವಿ ಗೋಣೆಪ್ಪನವರ, ಚಂದ್ರಶೇಖರ ಮಡಿವಾಳರ, ಕೊಟ್ರೇಶ ಕುಂದಾಪುರ, ಪ್ರಭಾಕರ ಶಿಗ್ಲಿ, ಶಿವಪ್ಪ ಗುರಿಕಾರ, ಮಾರುತಿ ತಳವಾರ, ಪ್ರೇಮ್ಕುಮಾರ, ಮಳಿಮಠ, ಶಿವಕುಮಾರ ಜಾದವ್, ಸೇರಿದಂತೆ ಮತ್ತಿತರೆ ಗಣ್ಯರು, ಕಾರ್ಯಕರ್ತರು ಚುನಾವಣೆ ಕುರಿತಂತೆ ಮಾತನಾಡಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ, ಗೌರವಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮ ಪ್ರೊ. ಆಯೋಜಕ ಶ್ರೀನಿವಾಸ ನೆಲವಾಗಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿಆರ್ಪಿ ಜಗದೀಶ್ ಹುಳ್ಯಾಳ ನಿರೂಪಿಸಿ ವಂದಿಸಿದರು.