ಕಾರವಾರ

ಕಾರವಾರ ನಗರಸಭೆ: ಮೂರು ದಿನ ನೀರು ಸರಬರಾಜು ವ್ಯತ್ಯಯ

ಕಾರವಾರ ನಗರಸಭೆ: ಮೂರು ದಿನ ನೀರು ಸರಬರಾಜು ವ್ಯತ್ಯಯ

ಲೋಕದರ್ಶನ ವರದಿ 

ಕಾರವಾರ,ಜೂ.3: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಜೋನ್‌-2 ಪ್ರದೇಶದಲ್ಲಿ 300 ಎಮ್‌.ಎಮ್‌. ನೀರಿನ ಮುಖ್ಯ ಕೊಳವೆ ಒಡೆದು ಹೋಗಿದ್ದು, ಜೂ.4 ರಿಂದ ಜೂ.7 ರ ವರೆಗೆ ಕಾಜುಬಾಗ, ಕೋಡಿಬಾಗ ಮುಖ್ಯ ರಸ್ತೆ, ನಂದನಗದ್ದಾ, ಮಧ್ಯವಾಡ, ಶಿವಾಜಿವಾಡಾ, ಟೋಲ್‌ನಾಕಾ, ತಾಮಸೆವಾಡಾ, ನದಿವಾಡ, ಅಂಬೇಡ್ಕರ್ ಕಾಲೋನಿ, ತೆಲಂಗ ರೋಡ್ ಚಂದ್ರಾದೇವಿ, ಗಿಂಡಿವಾಡಾ, ಸುಂಕೇರಿ ವರೆಗೆ  ದುರಸ್ಥಿ ಕಾಮಗಾರಿ ಕೈಗೊಳ್ಳಲಿರುವ ಕಾರಣ ಮೂರು ದಿನಗಳ ವರೆಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುಂತೆ ನಗರಸಭೆಯ ಪೌರಾಯುಕ್ತರು ಕೋರಿದ್ದಾರೆ. 


ಸುದ್ದಿ ಓದಿ