ಅಜ್ಞಾನದಿಂದ ಸುಜ್ಞಾನದಡೆಗೆ ಸಾಗುವುದೇ ಕಾರ್ತಿಕೋತ್ಸವ
ರಾಣಿಬೆನ್ನೂರ 15: ಕಾರ್ತಿಕೋತ್ಸವವು ಕತ್ತಲೆಯಿಂದ ಬೆಳಕಿನಡೆಗೆ, ಅಜ್ಞಾನದಿಂದ ಸುಜ್ಞಾನದಡೆಗೆ ಸಾಗುವುದೇ ಈ ಉತ್ಸವದ ತಾತ್ಪರ್ಯವಾಗಿದೆ, ಸರ್ವರೂ ಗುರು ತೋರಿಸಿದ ದಾರಿಯಲ್ಲಿ ಸಾಗುವ ಮೂಲಕ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು ಎಂದು ಗುರು ನಾಗರಾಜಾನಂದ ಸ್ವಾಮಿಜಿ ಹೇಳಿದರು.
ಶನಿವಾರ ಸಂಜೆ ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂದವಾದ ಪಣತಿಗೆ, ಗುರಿ ಎಂಬ ಬತ್ತಿ ಹಾಕಿ, ಜ್ಞಾನವೆಂಬ ಎಣ್ಣಿ ಹಾಕಿ, ಸುಜ್ಞಾನ ಎಂಬ ಬೆಳಕನ್ನು ಹಚ್ಚಿದಾಗ ಸರ್ವರ ಹೃದಯದಲ್ಲಿ ಅಡಗಿರುವ ಅಜ್ಞಾನವೆಂಬ ಕತ್ತುಲು ತೊಲಗುವುದು. ಅಲ್ಲದೆ ಸಿದ್ಧಾರೂಢ ದರ್ಶನ ಪಡೆದವರಿಗೆ ಮಾತ್ರ ಬೆಳಕು ಕಾಣಲು ಸಾಧ್ಯ ಎಂದು ಶ್ರೀಗಳು ನುಡಿದರು.
ಶ್ರೀಮಠದ ಟ್ರಸ್ಟ್ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ರುದ್ರ್ಪ ಲಮಾಣಿ, ಕರೂರ ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ಧನ ಕಡೂರ, ಶ್ರೀಮಠದ ಟ್ರಸ್ಟ್ ಅಧ್ಯಕ್ಷ ಫಕ್ಕೀರ್ಪ ಗೌಡ್ರ, ನ್ಯಾಯವಾದಿ ಎಂ.ಬಿ.ಚಿನ್ನಪನವರ, ಶಿವಪ್ಪ ಬಣಕಾರ, ಡಾಕೇಶ ಲಮಾಣಿ, ಗುಡ್ಡೇಶ ಹಡೆಯಾಲ, ಸಿ.ಎನ್. ನಾಗರಾಜ, ಯಮನಪ್ಪ ಗೌಡ್ರ, ಶಿವಲಿಂಗಪ್ಪ ಗೌಡ್ರ, ಗೋಪಾಲ ಕೊಡ್ಲೇರ, ಹನುಮಂತಪ್ಪ ಕೊಡ್ಲೇರ, ಮಾರುತಿ ಭೂತಪ್ಪನವರ, ರಾಮಚಂದ್ರ್ಪ ಬಾಗಿಲದವರ, ಅರುಣ ಹೆಡಿಯಾಲ, ಅಜ್ಜಪ್ಪ ಪಾಚಪಾರಿ, ಪರಶಪ್ಪ ತೋಟಗೇರ, ಶೇಖಪ್ಪ ತೋಟಗೇರ, ಶಾಂತಪ್ಪ ಬಾಗಿಲದವರ, ಗಂಗಮಾಳಮ್ಮ ಹೆಡಿಯಾಲ, ರತ್ನವ್ವ ಮಲಕನಹಳ್ಳಿ, ಗಿರಿಜಮ್ಮ ಗೌಡ್ರ, ಗಣೇಶ ಕೊಡ್ಲೇರ ಸೇರಿದಂತೆ ನೂರಾರು ಭಕ್ತರು ಇದ್ದರು.
ಬೆಳಗ್ಗೆ ಶ್ರೀಸದ್ಧಾರೂಢ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಮಂಗಳಾರತಿಯೊಂದಿಗೆ ಪೂಜಾ ವಿಧಿ ವಿಧಾನಗಳ ನಡೆದವು. ಸಂಜೆ ಶ್ರೀಸದ್ಧಾರೂಢರ ಪಾಲಕಿಯೋತ್ಸವ ಭಕ್ತರ ಸಮ್ಮೂಖದಲ್ಲಿ ನಡೆದು ಅನಂತರ ಕಾರ್ತಿಕೋತ್ಸವ ನಡೆಯಿತು. ತದನಂತರ ಅನ್ನಸಂತರೆ್ಣ ಜರುಗಿತು.