ಮಾರ್ಕಂಡೇಶ್ವರ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ
ರಾಣೇಬೆನ್ನೂರು 21: ಇಲ್ಲಿನ ಶಿದ್ದೇಶ್ವರ ನಗರದ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಮಾರ್ಕಂಡೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಮತ್ತು ನವಗ್ರಹ ಎಲ್ಲಾ ದೇವತೆಗಳ ವಾರ್ಷಿಕ ಸಂಪ್ರದಾಯದ ಮಹಾ ಕಾರ್ತಿಕೋತ್ಸವವು ನಡೆಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಕಡ್ಲಿಬಾಳ, ಪ್ರವೀಣ ಗುತ್ತೂರ, ಪರಶುರಾಮ ಅಗಡಿ, ವೀರಯ್ಯ ಸ್ವಾಮಿಗಳು ಸೇರಿದಂತೆ ನೂರಾರು ಭಕ್ತರು ಸ್ವಾಮಿಯಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.
ಪದ್ಮಸಾಲಿ ಪೀಠದ ಜಗದ್ಗುರು ಪ್ರಭುಲಿಂಗ ಮಹಾಸ್ವಾಮಿಗಳವರು ದೀಪಗಳನ್ನು ಹಚ್ಚುವುದರ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಅಧ್ಯಕ್ಷ ನಾಗರಾಜ ಅಗಡಿಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ನೀಲಪ್ಪ ಕುಮಾರ್ಪನವರ, ಬಸವರಾಜ ಐರಣಿ, ಮಾರುತಿ ಗರಡಿಮನಿ, ಇ.ಇ.ಹಳ್ಳಿ, ಹನುಮಂತಪ್ಪ ಸುಂಕಾಪುರ, ರೇವಣೆಪ್ಪ ಗುತ್ತೂರ, ಶಿವಣ್ಣ ಬಡೆಂಕಲ್, ರಮೇಶ ಬಡೆಂಕಲ್, ಮಲ್ಲಿಕಾರ್ಜುನ ಮ್ಯಾಗೇನಹಳ್ಳಿ, ಗಣೇಶ ಗರಡಿಮನಿ, ವೆಂಕಟೇಶ ಪೇನಗೊಂಡಲ, ಶಂಕರ್ಪ ಗರಡಿಮನಿ, ರೇಖಪ್ಪ ಕಡ್ಲಿಬಾಳ, ಬೆನಕೇಶ ಹದಡಿ, ರಾಮಣ್ಣ ಗುತ್ತಲ, ಹನುಮಂತಪ್ಪ ಗುತ್ತಲ, ಕಾಳಪ್ಪ ಕಿಚಡಿ, ನಾಗರಾಜ ಕಾಸಲ, ಈಶ್ವರ ಗುಂಡೆರಮತ್ತಿತರ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.