ರಾಣೆಬೆನ್ನೂರ

ಜಂಗಮ ಕ್ಷೇತ್ರ ತಿಪ್ಪಾಯಿ ಕೊಪ್ಪದಲ್ಲಿ ಕಾರ್ತಿಕೋತ್ಸವ

ಜಂಗಮ ಕ್ಷೇತ್ರ ತಿಪ್ಪಾಯಿ ಕೊಪ್ಪದಲ್ಲಿ ಕಾರ್ತಿಕೋತ್ಸವ

ರಾಣೇಬೆನ್ನೂರು 14:  ಭಾರತೀಯ  ಸಂಸ್ಕ್ರತಿ  ಪರಂಪರೆಯು  ವೇದ ಇತಿಹಾಸ  ಕಾಲಗಳಿಂದಲೂ  ದಾನ, ಧರ್ಮ, ಪರೋಪಕಾರ ಮತ್ತು  ಮಾನವೀಯ ಧರ್ಮದ  ನೆಲೆಗಟ್ಟಿನಲ್ಲಿ  ಸಾಗುತ್ತಾ  ಬಂದಿದೆ.  ಇದರಿಂದಲೇ  ಪ್ರತಿಯೊಬ್ಬ ಭಾರತೀಯರು  ಸದಾಕಾಲ  ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸದಿಂದ  ಭಾವೈಕ್ಯೆತೆಯಿಂದ  ಬದುಕಿ  ಬಾಳಲು  ಸಾಧ್ಯವಾಗುತ್ತಲಿದೆ ಎಂದು ರಾಣೇಬೆನ್ನೂರು  ಸೇವಾ ಅಂಧರ  ಸಂಸ್ಥೆಯ    ಹಾಗೂ  ಜಿಲ್ಲಾ  ವಿಕಲಚೇತನ  ಮಕ್ಕಳ  ವಸತಿಶಾಲೆಗಳ  ಸ್ವಯಂಸೇವಾ  ಸಂಘದ ಜಿಲ್ಲಾಧ್ಯಕ್ಷ  ಹೆಚ್‌. ಆರ್‌. ಶಿವಕುಮಾರ್  ಹೇಳಿದರು.   

ಅವರು ತಾಲೂಕಿನ ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪ  ಶ್ರೀ  ಗುರು  ಮೂಕಪ್ಪ ಶಿವಯೋಗಿಗಳ  ಮಠದಲ್ಲಿ  ನಡೆದ  ವಾರ್ಷಿಕ  ಸಂಪ್ರದಾಯದ  ಮಹಾ ಕಾರ್ತಿಕೋತ್ಸವ  ಸಮಾರಂಭದಲ್ಲಿ  ಶ್ರೀ  ಮಠದಿಂದತಮ್ಮ ಸಂಸ್ಥೆಯ  ಸೇವಾಸಾಧನೆಗಾಗಿ  ನೀಡಿದ ಅಭಿನಂದನಾ  ಸನ್ಮಾನ  ಸ್ವೀಕರಿಸಿ  ಮಾತನಾಡಿದರು.  ಬಾಲ್ಯದಿಂದಲೂ ತಮ್ಮ ಜೀವನದಲ್ಲಿ  ಅನೇಕ  ಕಷ್ಟ ಕಾರ​‍್ಪಣಯಗಳನ್ನು  ಅನುಭವಿಸುತ್ತಾ  ಬಂದಿದ್ದರಿಂದಲೇ  ವಿಕಲಚೇತನರ  ಮಕ್ಕಳ  ಸೇವೆಯಲ್ಲಿ  ತೊಡಗಿಸಿಕೊಳ್ಳಲು  ಸಾಧ್ಯವಾಯಿತು.  ಪ್ರಸ್ತುತ  ಸಂಸ್ಥೆಯಲ್ಲಿಅಂಧ, ಮೂಕ, ಕಿವುಡ, ಮತ್ತುಅಂಗವೈಕಲ್ಯತೆ  ಹೊಂದಿದ  300ಕ್ಕೂ  ಹೆಚ್ಚು  ಮಕ್ಕಳ  ಪಾಲನೆ ಪೋಷಣೆ  ಮತ್ತುಅವರ  ಸಂಪೂರ್ಣ  ಶಿಕ್ಷಣ  ನಡೆಯುತ್ತಲಿದೆ ಎಂದರು.  

ಜಂಗಮಕ್ಷೇತ್ರದ  ವಿರೂಪಾಕ್ಷ  ಮಹಾ ಸ್ವಾಮಿಗಳು  ದಿವ್ಯಸಾನಿಧ್ಯ  ವಹಿಸಿದ್ದರು. ಮಠದ ಮಹಾಂತ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.  ಕಾರ್ಯಕ್ರಮದಲ್ಲಿ  ಸ್ವಯಂಸೇವಾ  ಸಂಘದ ಜಿಲ್ಲಾ  ಕಾರ್ಯದರ್ಶಿ ಎನ್‌.ಹೆಚ್‌. ದಯಾನಂದ,  ನಿರ್ದೇಶಕ  ಮುರಗಯ್ಯ  ವಿರಕ್ತಮಠ,  ಕೊಟ್ರಯ್ಯ ಬಳ್ಳಾರಿಮಠ,  ನಮ್ರತಾ ಗುಡದಳ್ಳಿ, ಮೊದಲಾದವರನ್ನು  ಸನ್ಮಾನಿಸಲಾಯಿತು.  ವೇದಿಕೆಯಲ್ಲಿ  ನಾಡಿನ ಅನೇಕ  ಗಣ್ಯರು, ಗ್ರಾಮಸ್ಥರು ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ