ಎಡಿಯೂರು ಕ್ಷೇತ್ರದಲ್ಲಿ ಡಿ. 4ರಂದು ಕಾರ್ತಿಕ ಲಕ್ಷ ದೀಪೋತ್ಸವ
ಲೋಕದರ್ಶನ ವರದಿ
ರಾಣೇಬೆನ್ನೂರು 25: ಪ್ರತಿ ವರ್ಷದಂತೆ ಈ ವರ್ಷವು ಸಹ ತನ್ನ 46ನೇ ವರ್ಷದ ಸದ್ಭಾವನಾ ಪಾದಯಾತ್ರೆಯೂ ಕಳೆದ ನವೆಂಬರ್ 19ರಿಂದ ಶಲವಡಿ ಗ್ರಾಮದ ಮೌನೇಶ್ವರ ಭಜನಾ ಸಂಘವು ಎಡಿಯೂರ ಸಿದ್ದಲಿಂಗೇಶ್ವರ ಶ್ರೀ ಕ್ಷೇತ್ರದಲ್ಲಿ ಡಿಸೆಂಬರ್ 4 ರಂದು ನಡೆಯುವ ಕಾರ್ತಿಕ ಲಕ್ಷ ದೀಪೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೂಳ್ಳಲು ತಮ್ಮ ಪ್ರಯಾಣ ಬೆಳೆಸಿದರು.
ನೂರಾರು ಭಕ್ತರನ್ನೂಳಗೂಂಡ ಪಾದಯಾತ್ರಾ ಮೇರವಣಿಗೆಯನ್ನು ನಗರದಲ್ಲಿ ಭವ್ಯ ಸ್ವಾಗತ ನೀಡಿದ ಹೂಸನಗರದ ಮಾಜಿ ಸ್ವಾತಂತ್ರ್ಯ ಯೋಧರಾದ ಶಿವಪ್ಪ ಹಾಲಪ್ಪ ಅಸುಂಡಿ ಅವರ ಕುಟುಂಬ ವರ್ಗದವರು ಪಾದ ಪೂಜೆ ಸಲ್ಲಿಸಿ ಬರ ಮಾಡಿಕೂಂಡು, ನಂತರ ಪ್ರಸಾದವನ್ನು ಸಮರ್ಿಸಿ ಮುಂದಿನ ಪ್ರಯಾಣಕ್ಕೆ ಬಿಳ್ಕೂಟ್ಟರು. ಪಾದಯಾತ್ರಯಲ್ಲಿ ಚಂದ್ರಶೇಖರ ಕಡ್ಲಿ, ಷಣ್ಮುಖಯ್ಯಾ ವೀರಕ್ತಮಠ, ಗುರುಸಿದ್ದಪ್ಪ ಹೂಗಾರ, ಸುನೀಲ್ ಅಕ್ಕಿಮರಡಿ, ವೀರಯ್ಯ ನಮಸ್ತೆಮಠ, ಬಸವರಾಜ ಹಕ್ಕರಕಿ, ಮಂಜಣ್ಣ ಜಲ್ಲಿ, ಸಂಗಮೇಶ ಅಕ್ಕಿ, ಸೇರಿದಂತೆ ನವಲಗುಂದ ತಾಲೂಕಿನ ಶಲವಡಿ, ಬಾಗಲಕೋಟೆ, ಇಂಗಳಳ್ಳಿ, ಗದಗ, ಜಿಲ್ಲೆಯ ವಿವಿಧ ತಾಲೂಕುಗಳ ಶರಣರು ಪಾಲ್ಗೂಂಡಿದ್ದರು.
ನಗರದ ವರ್ತಕರಾದ ಕುಮಾರ ಜಂಬಗಿ , ಬಸವರಾಜ ಕುರವತ್ತಿ, ಭಾರತಿ ಜಂಬಗಿ, ಕೊಟ್ರೇಶಪ್ಪ ಎಮ್ಮಿ, ಜಯಣ್ಣ ಚನಗೌಡ್ರ, ಶಿವಯೋಗಿ ಅಸುಂಡಿ, ಗಂಗಮ್ಮ ಅಸುಂಡಿ, ಪ್ರಭಣ್ಣ ಹಂಸಾಗರ, ಮೊದಲಾದವರು ತಮ್ಮ ವಾರ್ಷಿಕ ಸಂಪ್ರದಾಯದ ಭಕ್ತಿ ಸೇವೆ ಸಲ್ಲಿಸಿದರು.