ಚಿಕ್ಕೋಡಿ

ಚಿಂಚಣಿ ಮಠದಲ್ಲಿ ದಿ.2 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ

ಚಿಂಚಣಿ ಮಠದಲ್ಲಿ ದಿ.2 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ

ಚಿಕ್ಕೋಡಿ 31: ಗಡಿ ಕನ್ನಡಿಗರ ಬಳಗದ ಚಿಕ್ಕೋಡಿ ತಾಲೂಕಿನ ಚಿಂಚಣಿ ಅಲ್ಲಮಪ್ರಭು ಸಿದ್ದಸಂಸ್ಥಾನಮಠದಲ್ಲಿ ದಿ.2 ರಂದು ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರೆ​‍್ಣ ಕಾರ್ಯಕ್ರಮ ನಡೆಯಲಿದೆ ಎಂದು ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದರು. 

ತಾಲೂಕಿನ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕನ್ನಡ ಕನ್ನಡಿಗ ಕರ್ನಾಟಕ ಇದು ಪ್ರತಿಯೊಬ್ಬ ಕನ್ನಡಿಗನ ಧ್ಯೇಯ ವ್ಯಾಕ್ಯ ಆಗಬೇಕು. ಪ್ರತಿಯೊಬ್ಬ ಕನ್ನಡದ ಬಗ್ಗೆ ಚಿಂತನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. 

ಕಳೆದ ಹತ್ತು ವರ್ಷದ ಹಿಂದೆ ಬೆಳಗಾವಿಯಲ್ಲಿ ಕನ್ನಡ ಕಾರ್ಯಕ್ರಮ ಮಾಡಬೇಕಾದರೆ ಸಾಕಷ್ಟು ಸಮಸ್ಯೆ ಎದುರಿಸಿ ಕನ್ನಡ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಇಂದು ಬದಲಾವಣೆಯಾಗಿದೆ. ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ನಾಡು, ನುಡಿ,ಜಲ ಮತ್ತು ಭಾಷೆ ಬಗ್ಗೆ ಅಭಿಮಾನಿ ಮೂಡಿದೆ. ಹೀಗಾಗಿ ಗಂಡು ಮೆಟ್ಟಿನ ನಾಡು ಬೆಳಗಾವಿಯಲ್ಲಿ ರಾತ್ರಿ 12 ಗಂಟೆಯವರಿಗೂ ಕನ್ನಡ ದೇವಿ ಮೆರವಣಿಗೆ ನಡೆಯುತ್ತಿರುವುದು ಕನ್ನಡಕ್ಕೆ ಶಕ್ತಿ ಬಂದಿದೆ ಎಂದರು. 

ಗಡಿಯಲ್ಲಿ ಕನ್ನಡತನ ಗಟ್ಟಿ ಉಳಿಯಲು ಚಿಂಚಣಿ ಜನ ಕಲ್ಯಾಣ ಸಂಸ್ಥೆಯ ಗಡಿ ಕನ್ನಡಿಗರ ಬಳಗ ಪ್ರತಿ ವರ್ಷ ಅದ್ದೂರಿಯಾಗಿ ಕನ್ನಡ ಕಾರ್ಯಕ್ರಮ ಮಾಡಿ ಗ್ರಂಥ ಲೋಕಾರೆ​‍್ಣ ಮಾಡಲಾಗುತ್ತದೆ. ಚಿಂಚಣಿ ಮಠದಿಂದ ಇಲ್ಲಿಯವರಿಗೆ 52 ಕನ್ನಡ ಪುಸ್ತಕಗಳು ಪ್ರಕಟಣೆ ಮಾಡಲಾಗಿದೆ. ನಾಡಿನ ಸಾಹಿತ್ಯ ದಿಗ್ಗಜ್ಜರನ್ನು ಗಡಿ ಭಾಗಕ್ಕೆ ಕರೆದುಕೊಂಡು ಬಂದು ರಾಜ್ಯೋತ್ಸವ ಆಚರಿಸಲಾಗಿದೆ. ಗಡಿ ಗ್ರಾಮದಲ್ಲಿಯೂ ಕೂಡಾ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. 

ನ.2 ರಂದು ನಡೆಯುವ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರೆ​‍್ಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಬಿ ಮಂಜಮ್ಮ ಜೋಗತಿ ಆಗಮಿಸಲಿದ್ದು, ದೆಹಲಿ ಪ್ರತಿನಿಧಿ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  

ಸಾಹಿತಿ ಎಲ್‌.ಎಸ್‌.ಶಾಸ್ತ್ರಿ ಬರೆದ ಕನ್ನಡ-ಮರಾಠಿ ಸ್ನೇಹಸೇತು ಕೃ.ಶಿ.ಹೆಗಡೆ ಕುರಿತು ಗ್ರಂಥವನ್ನು ಶಾಸಕ ಗಣೇಶ ಹುಕ್ಕೇರಿ ಲೋಕಾರೆ​‍್ಣ ಮಾಡಲಿದ್ದಾರೆ. ಮರಳು ಶಂಕರದೇವರು ಬೃಹತ್ ಕಾದಂಬರಿ ಕರ್ತೃ ಡಾ, ದಯಾನಂದ ನೂಲಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಣ ಡಂಗೇರ, ಗ್ರಂಥ ದಾಸೋಹ ಪ್ರಾಚಾರ್ಯ ಶಶಿಧರ ತೋಡಕರ ಆಗಮಿಸಲಿದ್ದಾರೆ ಎಂದು ತಿಳಿಸಿದರು. 


ಸುದ್ದಿ ಓದಿ