ಇಂಡಿ

ರಾಚೋಟೇಶ್ವರ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ರಾಚೋಟೇಶ್ವರ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಇಂಡಿ 1 :ಸಮಸ್ತ ಕನ್ನಡಿಗರು ಕಾಯುತ್ತಿರುವ ಕನ್ನಡ ಹಬ್ಬ "ಕನ್ನಡ ರಾಜ್ಯೋತ್ಸವ". ಇಂಡಿ ತಾಲ್ಲೂಕಿನ ಎಲ್ಲೆಡೆ ಸಡಗರ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಬಾವುಟ ತಾಯಿ ಭುವನೇಶ್ವರಿಗೆ ನಮನ.

ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಗುರು ರಾಚೋಟೇಶ್ವರ ವಿಧ್ಯಾ ವಿಕಾಸ ಸಂಸ್ಥೆಯ ಶಾಲೆಯ ಆವರಣದಲ್ಲಿ ಆ ಸಂಸ್ಥೆಯ ಅಧ್ಯಕ್ಷರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನವೆಂಬರ್ 1ರಂದು ಕನ್ನಡಿಗರು ಈ ದಿನವನ್ನು ನಾಡಹಬ್ಬವಾಗಿ ಪ್ರತಿವರ್ಷ ಆಚರಿಸುತ್ತಾರೆ.1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದಿನ ಮೈಸೂರು ಮಹಾರಾಜರಾಗಿದ್ದ ಒಡೆಯರ್ ಅವರು ತಮ್ಮ ರಾಜ್ಯವನ್ನು ಭಾರತ ದೇಶದೊಂದಿಗೆ ವೀಲೀನ ಮಾಡಲು ಒಪ್ಪಿದರು. ಹೀಗಾಗಿ 1950ರಲ್ಲಿ ಮೈಸೂರು ಭಾರತದ ಒಂದು ರಾಜ್ಯವಾಯಿತು.ಭಾರತ ದೇಶದಲ್ಲಿ ರಾಜ್ಯಗಳ ವೀಲೀನಿಕರಣ ಪ್ರಕ್ರಿಯೆಯು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿತ್ತು. ನಂತರ 1956ರ ರಾಜ್ಯ ಪುನರ್ವಿಂಗಡನಾ ಕಾಯ್ದೆಯ ಜಾರಿಯೊಂದಿಗೆ ಈ ಪ್ರಕ್ರಿಯೆ ಮುಕ್ತಾಯವಾಯಿತು. ಕೂರ್ಗ, ಮದರಾಸು, ಹೈದರಾಬಾದ್ ಮತ್ತು ಬಾಂಬೆ ಸಂಸ್ಥಾನದ ಕೆಲ ಪ್ರದೇಶಗಳು ಈ ಪ್ರಕ್ರಿಯೆಯಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು.ನಂತರ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡಲಾಯಿತು. ಆರಂಭದಲ್ಲಿ 19 ಜಿಲ್ಲೆಗಳು ಕರ್ನಾಟಕದಲ್ಲಿದ್ದವು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದ ಸವಿ ನೆನಪಿಗಾಗಿಯೇ ಪ್ರತಿವರ್ಷ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯರಾದ ಹಣಮಂತರಾಯ ಮಿರ್ಜಿ, ಚಿನ್ನಪ್ಪ ಕುಂಬಾರ ಹಾಗೂ ಶಾಲೆಯ ಮುಖ್ಯಗುರುಗಳಾದ ಶ್ರೀಶೈಲ ಹೂಗಾರ ಬಸವರಾಜ ರೂಗಿ ನಿತ್ಯಾನಂದ ಟಕ್ಕಳಿಕಿ  ಪ್ರಕಾಶ್ ಯಳಮೇಲಿ ಸೋಮಪ್ಪ ವಡವಡಗಿ ಮಂಜುನಾಥ ಮಕಣಿ ರಾಜಶೇಖರ ಹಡಪದ ಪ್ರೇಮಾ ಗಿಣ್ಣಿ ಅಂಬಿಕಾ ಇಂಡಿ ಪೂಜಾ ಹಚ್ಯಾಳ ಗಂಗಮ್ಮ ನಾಟಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು 


ಸುದ್ದಿ ಓದಿ