ಶಿಗ್ಗಾವ್

ಕುನ್ನೂರ ಇಂಟರನ್ಯಾಶನಲ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ

ಕುನ್ನೂರ ಇಂಟರನ್ಯಾಶನಲ್ ಶಾಲೆಯಲ್ಲಿ  ಕರ್ನಾಟಕ ರಾಜ್ಯೋತ್ಸವ

ಶಿಗ್ಗಾವಿ 02: 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಯಿ ಭುವನೇಶ್ವರಿ ಮಾತೆ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಂಸ್ಥೆಯ ನಿದೇರ್ಶಕರಾದ ಈರಣ್ಣಾ ಬಡ್ಡಿ ಮತ್ತು ಶಿವಪುತ್ರ​‍್ಪ ಜಕ್ಕಣ್ಣವರ ನೇರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ್‌.ಹೆಚ್‌.ಹಾವೇರಿ, ಹಿರಿಯ ಶಿಕ್ಷಕ ಡಿ.ಬಿ.ಶಿರೂರ ಸೇರಿದಂತೆ ಶಾಲಾ ಶಿಕ್ಷಕಿಯರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ