ಬಳ್ಳಾರಿ

ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ನೂತನ ಪದಾಧಿಕಾರಿಗಳ ನೇಮಕ

ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ನೂತನ ಪದಾಧಿಕಾರಿಗಳ ನೇಮಕ

ವಿಜಯನಗರ 24: ರವಿವಾರ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ನಗರದ ಪ್ರವಾಸಿ ಮಂದಿರದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನೂತನವಾಗಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರನ್ನು ಹಾಗೂ ಉತ್ತರ ಕರ್ನಾಟಕ ಕಾರ್ಮಿಕ ಘಟಕದ ಅಧ್ಯಕ್ಷರನ್ನು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರನ್ನು ಮತ್ತು ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು. ಈ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ವಿಜಯಕುಮಾರ್ ರವರು ಮಾತನಾಡಿ ನಮ್ಮ ನಾಡಿನ ನೆಲ, ಜಲ, ಬಾಷೆಯ ಏಳಿಗೆಗೆ ದುಡಿಯುವಲ್ಲಿ ನಮ್ಮ ಸಂಘಟನೆಯು ಯಾವಾಗಲು ಮುಂಚೂಣಿಯಲ್ಲಿರುತ್ತದೆ. ಕನ್ನಡಕ್ಕೆ ಧಕ್ಕೆ ತರುವ ಮತ್ತು ನಮ್ಮ ಬಾಷೆಗೆ ಕುಂದುಂಟು ಮಾಡುವ ಯಾವುದೇ ದೊಡ್ಡ ಶಕ್ತಿಗಳು ಬಂದರೂ ಅವುಗಳನ್ನು ಸದೆಬಡೆದು ಪ್ರಾಣತ್ಯಾಗ ಮಾಡಿಯಾದರೂ ಕನ್ನಡಮ್ಮನ ಉಳಿವಿವಾಗಿ ಹೋರಾಟ ಮಾಡಲು ಪ್ರತಿಯೊಂದು ಗ್ರಾಮ, ನಗರ, ಜಿಲ್ಲೆ ರಾಜ್ಯ ಮಟ್ಟದಲ್ಲಿ ಪ್ರತಿಯೊಬ್ಬ ಪ್ರಜೆಯು ಎದೆ ಕೊಟ್ಟು ನಿಲ್ಲಬೇಕಾಗಿದೆ. ಏಕೆಂದರೆ ನಮ್ಮ ಅಕ್ಕ ಪಕ್ಕದ ರಾಜ್ಯದ ಕಿಡಿಗೇಡಿಗಳು ನಮಗೆ ತೊಂದರೆ ಕೊಡಲು ಸಜ್ಜಾಗಿದ್ದಾರೆ. ಅಂತಹವರನ್ನು ಹತ್ತಿಕ್ಕಿ ಮುಂದಿನ ಪೀಳಿಗೆಗೆ ನಮ್ಮ ಕನ್ನಡ ಬಾಷೆ, ನೆಲ, ಜಲವನ್ನು ಕಾಪಾಡಬೇಕಾಗಿದೆ ಅದಕ್ಕೆ ನೀವೆಲ್ಲರು ವೀರ ಯೋಧರಾಗಿ ದುಡಿಯಬೇಕಾಗಿದೆ ಎಂದು ಹೇಳಿದರು.  

ಅದೇ ರೀತಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಯೇಸು ನೇಮಿಸಲಾಯಿತು. ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ ಸಂಸ್ಥಾಪಕ ಅಧ್ಯಕ್ಷರಿಗೆ ನಾನು ಆಬಾರಿಯಾಗಿದ್ದು ನನಗೆ ಕನ್ನಡ ತಾಯಿಯ ನೆಲ, ಜಲ, ಬಾಷೆಯನ್ನು ಉಳಿಸಿ ಬೆಳೆಸಲು ನನಗೆ ಒಂದು ಒಳ್ಳೆಯ ಸದಾವಕಾಶವನ್ನು ಕಲ್ಪಿಸಿಕೊಟ್ಟಿದ್ದೀರಿ. ಅದೇ ರೀತಿಯಾಗಿ ನಮ್ಮ ದೇಶವು ಅನೇಕ ಬಾಷೆಗಳನ್ನು ಒಳಗೊಂಡ ದೇಶ ಅದರಲ್ಲಿ ಕನ್ನಡ ಬಾಷೆಗೆ ತನ್ನದೇ ಆದ ಚಾರಿತ್ರ್ಯವಿದೆ. ನೀರು ಕೇಳಿದರೆ “ಪಾನಕ” ಕೊಡೋದು ನಮ್ಮ ಜನರ ಸಂಸ್ಕೃತಿ ಎಲ್ಲಾ ಬಾಷೆಗಳಿಗಿಂತ ಕನ್ನಡ ಬಾಷೆ ಮಾತನಾಡಲು, ಕಲಿಯಲು ತುಂಬಾ ಸುಲಭ ಅಂತಾ ಬಾಷೆಯನ್ನು ನಾವುಗಳು ಉಳಿಸಿ ಬೆಳೆಸಬೇಕಾಗಿದೆ. ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ನಾಣ್ಣುಡಿ ಯಂತೆ ನಮ್ಮ ಬಾಷೆಯನ್ನು ಅಂತರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿಯಬೇಕಾಗಿದೆ. ಅದಕ್ಕಾಗಿ ನಾವು ಸಂಘಠನೆಯಿಂದ ದುಡಿಯಬೇಕಾಗಿದೆ. ಕನ್ನಡಕ್ಕಾಗಿ ಕೈ ಎತ್ತಿ ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಹಿರಿಯ ಕವಿಗಳು ಹೇಳಿದಂತೆ ನಾವುಗಳು ಕನ್ನಡ ತಾಯಿಯನ್ನು ಕೀರ್ತಿಯ ಉತ್ತುಂಗಕ್ಕೆ ಬೆಳೆಸಬೇಕು ಎಂದು ಹೇಳಿದರು.  

ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ಪ್ರಕಾಶ್ ಅವರನ್ನು ನೇಮಿಸಲಾಯಿತು ಮತ್ತು ಉತ್ತರ ಕರ್ನಾಟಕ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ಸೋಮಶೇಖರ್ ಅವರನ್ನು  ನೇಮಿಸಲಾಯಿತು. ಉಳಿದಂತೆ ಜಿಲ್ಲಾಧ್ಯಕ್ಷರನ್ನು ಯೇಸು, ರವರನ್ನು ನೇಮಿಸಿದರು ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ, ತಾಯಣ್ಣ, ಹೊನ್ನೂರವಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಜಿಲ್ಲಾ ಖಜಾಂಚಿಯಾಗಿ ಶೇಕ್ಷಾವಲಿ, ಜಿಲ್ಲಾ ಸಹ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ್, ಪ್ರದೀಪ್, ಶೇಖರ್ ರವರನ್ನು ನೇಮಿಸಿ ಆದೇಶ ಹೊರಡಿಸಲಾಯಿತು. 


ಸುದ್ದಿ ಓದಿ