ರಾಣೆಬೆನ್ನೂರ

ಕೋವಿಡ್ ಸಂಕಷ್ಟದ ಮಧ್ಯೆ ಕರಿಯಪ್ಪ ಅವರ ಸಮಾಜಮುಖಿ ಕಾರ್ಯ: ಗಣೇಶ ಲಮಾಣಿ

ಕೋವಿಡ್ ಸಂಕಷ್ಟದ ಮಧ್ಯೆ ಕರಿಯಪ್ಪ ಅವರ ಸಮಾಜಮುಖಿ ಕಾರ್ಯ: ಗಣೇಶ ಲಮಾಣಿ

ರಾಣೆಬೆನ್ನೂರ 13: ಪ್ರಸ್ತುತ ದಿನಗಳಲ್ಲಿ ಸ್ಥಿತಿವಂತ ವರ್ಗದವರು ಕೇವಲ ತಮ್ಮ ಸ್ವಾರ್ಥ ಪರತೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತ ತಮ್ಮ ಕುಟುಂಬದ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಾರೆ ಹೊರತು ಸಮಾಜದಲ್ಲಿ ಕಷ್ಟದಲ್ಲಿರುವ ಸಮುದಾಯ ಹಾಗೂ ಕಲಿಕಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುವರು ಅತ್ಯಂತ ವಿರಳ ಗಣೇಶ ಲಮಾಣಿ ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದೆಲ್ಲೇಡೆ ಸಾಂಕ್ರಾಮಿಕ ರೋಗದಿಂದ ಜನರು ತತ್ತರಿಸಿ ಹೊಗಿದ್ದಾರೆ ಇವುಗಳ ಮಧ್ಯೆ ತಾನು ಸಂಪಾದನೆ ಮಾಡಿರುವ ಆದಾಯದಲ್ಲಿನ ಅರ್ಧದಷ್ಟು ಆದಾಯ ಕಷ್ಟದಲ್ಲಿರುವರಿಗೆ ನೇರವಾಗುವುದರ ಜೊತೆಗೆ ಬಡ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸೇವೆ ಹೀಗೆ ನಿರಂತರವಾಗಿ ನಡೆಯಲಿ  ಎಂದರು.  

ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಲಕ್ಮೇಶ್ವರ ಇವರ ಸಂಯುಕ್ತಾಶ್ರಯದಲ್ಲಿ ರಾಣೆಬೆನ್ನೂರ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ನಡೆಯಿತು. 

ಯುವ ಉದ್ಯಮಿ ಹನುಮಂತ ಗೌಡಗೇರಿ ಮಾತನಾಡಿ, ಪ್ರಸ್ತುತ ಕೋವಿಡ್ ಸಂಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದೇ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ವಾತಾವರಣದಲ್ಲಿ ಅವೆಲ್ಲವನ್ನು ಸವಾಲಾಗಿ ತೆಗೆದುಕೊಂಡು ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ನೀಡುವುದರ ಮೂಲಕ ಅವರ ಕಲಿಕೆಗೆ ನೇರವಾಗಿದ್ದಾರೆ. ಕೇವಲ ಅವರ ಗ್ರಾಮ ಅಷ್ಟೇ ಅಲ್ಲದೇ ರಾಜ್ಯದ ಮೂಲೆ ಮೂಲೆಗೂ ಸಂಚಾರ ಮಾಡಿ ಕಷ್ಟದಲ್ಲಿರುವರಿಗೆ ನೇರವಾಗುವ ಕಾರ್ಯಕ್ಕೆ ತೋಡಗಿಸಿಕೊಂಡಿದ್ದಾರೆ. ಎಂದರು. 

ಉಪನ್ಯಾಸಕ ಶ್ರೀಕಾಂತ ಬೇಟಗೇರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣದ ಕೊರತೆ, ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನವಿಲ್ಲದೇ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿರಹಟ್ಟಿಯ ನೀಲಪ್ಪ ಗುಡ್ಡಪ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಕರಿಯಪ್ಪ ಅವರು, ಶಿಕ್ಷಣದ ಮಹತ್ವರಿತು ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮೊದಲು ದೊರಕಲಿ ಎಂಬ ಉದ್ದೇಶದಿಂದ ಇಂತಹ ಕೆಲಸದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ಅವರಂತೆಯೇ ಪ್ರತಿಯೋಬ್ಬರು ಕಷ್ಟದಲ್ಲಿರುವರಿಗೆ ಸಹಾಯ ಮಾಡುವಲ್ಲಿ ಮುಂದಾಬೇಕು ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ವೆಂಕಟಾಪುರ ಗ್ರಾಮಸ್ಥರಾದ ಹನುಮಂತ ಲಮಾಣಿ, ರಮೇಶ ಲಮಾಣಿ, ವನ್ಯಜೀವಿ ಛಾಯಾಗ್ರಾಹಕರಾದ ಚಂದ್ರು ಶಿಡೇನೂರ, ಕಲಾವಿದರಾದ ಪರಶುರಾಮ ಲಮಾಣಿ, ಡಿಕ್ಕಪ್ಪ ಲಮಾಣಿ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಪ್ರಕಾಶ ಲಮಾಣಿ, ನಾಗವ್ವ ಶಿಡೇನೂರ, ಯಂಕವ್ವ ಲಮಾಣಿ, ಹನುಮವ್ವ ಜಾಧವ,  ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 

ವೆಂಕಟಾಪುರ ಗ್ರಾಮದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಎಚ್ ಡಿ ಜಾಧವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕರಿಯಪ್ಪ ಶಿರಹಟ್ಟಿ ವಂದಿಸಿದರು. 


ಸುದ್ದಿ ಓದಿ