ಬಳ್ಳಾರಿ

ಸಂಭ್ರಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ

ಸಂಭ್ರಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ

ಲೋಕದರ್ಶನವರದಿ 

ಹೂವಿನಹಡಗಲಿ 06: ತಾಲೂಕಿನ ಬಾವಿಹಳ್ಳಿ ಹೊಳಗುಂದಿ ಗ್ರಾಮದ ಕರಿಬಸವೇಶ್ವರ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ 5.30ಗಂಟೆಗೆ ಸಡಗರ, ಸಂಭ್ರಮದಿಂದ  ಜರುಗಿತು. 

ಸಕಲ ವಾದ್ಯಗಳೊಂದಿಗೆ ಶ್ರೀಕರಿಬಸವೇಶ್ವರ ಸ್ವಾಮಿಯ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ರಥ ಬಳಿ ಕರೆತಂದು, ಮೂರು ಸುತ್ತು ಪ್ರದಕ್ಷಿಣಿ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ನಿಶಾನೆ ಹರಾಜಿನಲ್ಲಿ ಕೊಯಿಲಾರಗಟ್ಟಿ ಕೃಷ್ಣನಾಯ್ಕ 85,101ರೂ.ಗಳಿಗೆ ಸ್ವಾಮಿಯ ನಿಶಾನೆಯನ್ನು ಪಡೆದರು. ಬಳಿಕ ಭಕ್ತರ ಜಯಘೋಷ ಹರ್ಷೋದ್ಗಾರಗಳೊಂದಿಗೆ  ರಥ ಚಾಲನೆ ಪಡೆದುಕೊಂಡಿತು.  

ರಥೋತ್ಸವ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ​‍್ಿಸಿದರು. ದೇವಸ್ಥಾನದಲ್ಲಿ ಸ್ವಾಮಿಗೆ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸಿದರು..ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು. ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಬಾವಿಹಳ್ಳಿ-ಹೊಳಗುಂದಿ ಗ್ರಾಮಸ್ಥರು,ಮಹಿಳೆಯರು ಸೇರಿದಂತೆ ಗ್ರಾಮದ ಸುತ್ತುಮುತ್ತಲಿನ ಜನರು ಭಾಗವಹಿಸಿದ್ದರು. ಬುಧವಾರ ಬೆಳಿಗ್ಗೆ ಗ್ರಾಮದೇವತೆ ಚೌಡೇಶ್ವರಿ ದೇವಿಯ ಉಡಿ ತುಂಬುವ ಕಾರ‌್ಯಕ್ರಮ ಜರುಗಿತು. 


ಸುದ್ದಿ ಓದಿ