ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ರಾಣೇಬೆನ್ನೂರು.ಡಿ.20: ಬೆಳಗಾವಿ ನಗರದಲ್ಲಿನ ಎಂಇಎಸ್ ಕಾರ್ಯಕರ್ತರು ಮಾಡುತ್ತಿರುವ ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡರ ಬಣ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿ ಕನ್ನಡ ವಿರೋಧಿ ಸಂಘಟನೆಯನ್ನು ಸಂಪೂರ್ಣವಾಗಿ ವಜಾಗೊಳಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಗಣೇಶ ಗೋಣಿಬಸಮ್ಮನವರ, ಬೆಳಗಾವಿಯಲ್ಲಿ ಭುವನೇಶ್ವರಿ ದೇವಿಯ ಭೂಪಟ ಸುಟ್ಟಿರುವುದು ಅಕ್ಷಮ್ಯ ಅಪರಾಧ. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ಮತ್ತಷ್ಟು ಅಪರಾಧ. ಇಷ್ಟೆಲ್ಲ ಅಪರಾಧಗಳು ಎಂಇಎಸ್ ಮತ್ತು ಶಿವಸೇನೆ ಪುಂಡರು ಮಾಡುತ್ತಿದ್ದರೂ ಕರ್ನಾಟಕ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಮತ್ತಷ್ಟು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲು ಸಹಕಾರಿಯಾದಂತಾಗಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಸಂಘಟನೆ ವಜಾಗೊಳಿಸಿ ಪುಂಡತನ ಮೆರೆದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಗುರುರಾಜ ಗೋಜನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ದೊಡ್ಮನಿ, ಮಹಿಳಾ ತಾಲೂಕಾಧ್ಯಕ್ಷೆ ಕಾವ್ಯಾ ಚಿಕ್ಕಣ್ಣನವರ, ನಗರ ಘಟಕ ಅಧ್ಯಕ್ಷೆ ಪುಷ್ಪಾ ಹುಬ್ಬಳ್ಳಿ, ಗ್ರಾಮ ಘಟಕದ ಅಧ್ಯಕ್ಷ ಜುಂಜಪ್ಪ ಡೊಳ್ಳಿನ, ರವಿಕುಮಾರ ಪೂಜಾರ, ಕಿರಣಕುಮಾರ ಕಮ್ಮಾರ, ಶಿವು ಗುಜನೂರ, ಬಸವರಾಜ ದೇವರಗುಡ್ಡ, ಗಣೇಶ ಲಮಾಣಿ, ವಿಶ್ವಾಸ ಆಡೂರ, ಲಕ್ಷ್ಮೀ ಪಾಸ್ತೆ, ಉಮೇಶ ಲಮಾಣಿ, ಮುನಿಯಪ್ಪ ದೇವರಗುಡ್ಡ, ಜಯಮ್ಮ, ಕವಿತಾ ಸಾವಕ್ಕನವರ, ಆಚಿಜನೇಯ ಚಿಕ್ಕಣ್ಣನವರ, ಮಲ್ಲೇಶಪ್ಪ ಸಂಗಮ್ಮನವರ, ರತ್ನಾ ಪದ್ಮಗೌಡ್ರ, ಗುಡ್ಡಪ್ಪ ಜಾನಣ್ಣನವರ, ಮಹೇಶ ಡೊಳ್ಳಿನ, ನವಾಜಹ್ಮದ್ ಸೊಲ್ಲಾಪುರ, ರವಿಕುಮಾರ, ಜಯಪ್ಪ ಆಡೂರ, ದೇವೇಂದ್ರ್ಪ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.