ರಾಣೆಬೆನ್ನೂರ

ರಸ್ತೆ ಕಳಪೆ ಕಾಮಗಾರಿ: ಕರವೇ ಆಕ್ರೋಶ

ರಸ್ತೆ ಕಳಪೆ ಕಾಮಗಾರಿ: ಕರವೇ ಆಕ್ರೋಶ

ರಾಣೇಬೆನ್ನೂರು 22:-ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಹೊನ್ನಾಳಿಗೆ ಸಂಪರ್ಕ ಸಾಧಿಸುವ ಲೋಕೋಪಯೋಗಿ ಇಲಾಖೆ ನಿರ್ಮಿತ ರಸ್ತೆಯು ಗ್ರಾಮದಿಂದ ಹರಿದು ಹೋಗುವ ಗಟಾರವನ್ನು ಇದುವರೆಗೂ ಕಾಮಗಾರಿಯು ಪೂರ್ಣಗೊಂಡಿಲ್ಲವಾದರೂ ಕೇವಲ ಸ್ಟೀಲ್ ಕಾಂಕ್ರೀಟ್ ನಿರ್ಮಿತ ಈ ಗಟಾರವು ಕೇವಲ 20 ದಿನಗಳ ಒಳಗೆ ಮಾಡಿದ್ದಾರೆ. ಇದು ಪೂರ್ತಿ ಕಳಪೆಯಾಗಿದ್ದು ಬಿದ್ದು ಹೋಗಿದ್ದು ಕೂಡಲೇ ಈ ಕಾಮಗಾರಿ ಪುನ: ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಸಿದ್ದಾರೂಢ ಗುರುಂ ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.  

ಮನವಿ ಸಲ್ಲಿಸಿ ಮಾತನಾಡಿದ ಸಿದ್ದಾರೋಡ ಅವರು ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ದುರ್ಗಾದೇವಿ ದೇವಸ್ಥಾನದ ವರೆಗೆ ಈ ಚರಂಡಿ ಕಾಮಗಾರಿ ನಡೆದಿದೆ ಆದರೆ ಸಂಪೂರ್ಣ ಕಳಪೆಯಾಗಿದೆ. ಇಲ್ಲಯವರೆಗೂ ಸಂಬಂಧಿಸಿದ ಇಲಾಖೆಯ ಅಭಿಯಂತರರು ಸ್ಥಳ ಪರೀಶೀಲನೆ ಮಾಡಿಲ್ಲ ಈ ಕುರಿತು ಸಾಕಷ್ಟು ಬಾರಿ ಪರೀಶೀಲನೆಗಾಗಿ ಜಿಲ್ಲಾ ಪಂಚಾಯ್ತಿ ಇಂಜನೀಯರರವರ ಗಮನಕ್ಕೆ ತರಲಾಗಿದ್ದರೂ ಸ್ಥಳ ಭೇಟಿ ನೀಡಿಲ್ಲ ಇದು ಗ್ರಾಮದ ಜನರ ವಿರೋಧಿ ನಿತಿಯಾಗಿದೆ. ಸ್ಥಳೀಯ ಪಿಡಬ್ಲ್ಯುಡಿ ಇಲಾಖೆಯ ಅಭಿಯಂತರರನ್ನು ಸಹ ಪರೀಶೀಲನೆಗಾಗಿ ಮನವಿ ಮಾಡಿದರೂ ಇಲ್ಲಸಲ್ಲದ ಕಾರಣ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾದ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಸಿದ್ದರೋಡ ಗುರುಂ ಅವರು ಜಿಲ್ಲಾ ಪಂಚಾಯ್ತಿ ಇಲಾಖೆಯೂ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಮಾಡಿರುವ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದ್ದು ತನಿಖೆಗೆ ಒಳಪಡಿಸಬೇಕು ಇಲ್ಲವಾದಲ್ಲಿ ಗ್ರಾಮದಲ್ಲಿ ಉಗ್ರ ಹೋರಾಟ ಆರಂಭಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. 


ಸುದ್ದಿ ಓದಿ