ರಾಣೆಬೆನ್ನೂರ

ಕರಾಟೆ ಸ್ಪರ್ಧೆ: ತಾಲೂಕಾ ವಿದ್ಯಾರ್ಥಿಗಳ ಸಾಧನೆ

ಕರಾಟೆ ಸ್ಪರ್ಧೆ: ತಾಲೂಕಾ ವಿದ್ಯಾರ್ಥಿಗಳ ಸಾಧನೆ
ಶಿವಮೊಗ್ಗದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ತಾಲೂಕಾ ಕರಾಟೆ ಸಂಸ್ಥೆಯ ವಿದ್ಯಾ

ರಾಣೀಬೆನ್ನೂರ 02: ಶಿವಮೊಗ್ಗ ನಗರದ ಸ್ಕೌಟ್ ಭವನದಲ್ಲಿ ಇತ್ತೀಚೆಗೆ ಸಿಹಾನ್ ವಿನೋದ ಎಸ್ ಎಲ್ ಅವರು 2021ನೇ ಸಾಲಿನ ಮಲ್ನಾಡ್ ಓಪನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ ನಡೆಯಿತು. ಸದರಿ ಸ್ಪರ್ಧೆಯಲ್ಲಿ ತಾಲೂಕ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಎಂದಿನಂತೆ ಮತ್ತೊಮ್ಮೆ ಸಾಧನೆ ಮೆರೆದು ಜಿಲ್ಲೆಗೆ ಮತ್ತು ನಾಡಿಗೆ ಕೀರ್ತಿ ತಂದಿದ್ದಾರೆ. 

ಕಥಾ ವಿಭಾಗದಲ್ಲಿ ಆರ್. ಶ್ರೀನಿವಾಸ, ಎಸ್.ವಿ.ಸಂಪತ್, ಕೀರ್ತನಾ ಜಿ.ಸಿ. ದ್ವಿತೀಯ, ಹಾಗೂ ಇದೇ ವಿದ್ಯಾರ್ಥಿಗಳು ಕುಮಟೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಗೌತಮ್ ಲಮಾಣಿ, ದಾದಾಪೀರ್ ಜಡ್.ವೈ. ದ್ವಿತೀಯ, ಹರ್ಷ ಹೊನ್ನಾಳಿ ಬಹುಮಾನ ಪಡೆದು ಸಮಗ್ರ ಪ್ರಶಸ್ತಿ ಪಡೆದು ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಮುಖ್ಯ ತರಬೇತುದಾರ ದಿಲೀಪ್ ಅಂಬಿಗೇರ ಅವರು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ