ಫಲಾನುಭವಿಗಳಿಗೆ ಕಾರಂತ ಮಣಿಪಾಲ ಆರೋಗ್ಯ ಕಾರ್ಡ್
ರಾಣಿಬೆನ್ನೂರ 09: ಮಣಿಪಾಲ ಆರೋಗ್ಯ ಕಾರ್ಡ್ ನಮ್ಮ ಸಮುದಾಯಕ್ಕೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವಿ 21 ವರ್ಷಗಳನ್ನು ಪೂರೈಸಿದ್ದೇವೆ ಎಂದು ಕಸ್ತೂರಬಾ ಆಸ್ಪತ್ರೆಯ ಹಿರಿಯ ಉಪವ್ಯವಸ್ಥಾಪಕ ಕೆ. ಸಚಿನ ಕಾರಂತ ಹೇಳಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಫಲಾನುಭವಿ ಕುಟುಂಬಸ್ಥರಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಸಂಸ್ಥಾಪಕ ದಿ.ಡಾ. ಟಿ.ಎಂ.ಎ. ಪೈ ಯವರ ಕನಸನ್ನು ಈಡೇರಿಸಲು ಆರೋಗ್ಯ ಸೇವೆಯನ್ನು ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮಣಿಪಾಲ ಆರೋಗ್ಯ ಕಾರ್ಡ್ನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು ಎಂದರು.
ಕಳೆದ 21 ವರ್ಷಗಳಲ್ಲಿ ನಾವು ಸಮಾಜಿಕ ಕಾಳಜಿಯಂತೆಯೇ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. 21 ನೇ ವರ್ಷದ ಅಂಗವಾಗಿ ನಾವು ಕಾರ್ಡ್ಗಳನ್ನು ಸುಲಭವಾಗಿ ನೊಂದಾಯಿಸಲು ಸರಳ ಹಾಗೂ ಪೂರ್ವ ಸಂಖ್ಯಾ ಮುದ್ರಿತ ಕಾರ್ಡ್ ಸ್ಮಾರ್ಟ್ ಕಾರ್ಡ್ನ್ನು ಪರಿಚಯಿಸುತ್ತಿದ್ದೇವೆ ಮತ್ತು ಸಂಖ್ಯಾಮುದ್ರಿತ ಸ್ಮಾರ್ಟ್ ಕಾರ್ಡ್ ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ, ಮೌಲ್ಯ ಮತ್ತು ವಿಸ್ವಾಸರ್ಹ ಸೇವೆ ಎಂಬುದು ಈ ವರ್ಷದ ದ್ಯೇಯ ವಾಕ್ಯದೊಂದಿಗೆ ಕಾರ್ಡುದಾರರಿಗೆ ಸ್ಥಳದಲ್ಲೇ ನೀಡಲಾಗುವುದು ಎಂದರು.
ಕಸ್ತೂರಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿಯವರು 21 ನೇ ವರ್ಷದ ಮಣಿಪಾಲ ಆರೋಗ್ಯ ಕಾರ್ಡಿನ ಯೋಜನೆಯು ಒಂದು ವರ್ಷ ಮತ್ತು 2 ವರ್ಷದ ಯೋಜನೆಯ ಜೊತೆಗೆ ಕುಟೀಲನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯನ್ನು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸೇರಿ್ಡಸಲಾಗಿದೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿದವರು ದಾವಣಗೇರಿ, ಚಿತ್ರದುರ್ಗ, ಶಿವಮೋಗ್ಗ, ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಕರಾವಳಿ ಕರ್ನಾಟಕ, ಬಳ್ಳಾರಿ, ಮಧ್ಯಕರ್ನಾಟಕ ಸೇರಿದಂತೆ 12 ಕ್ಕೂ ಅಧಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಈ ಸೇವೆಗಳ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕಾರ್ಡಿನ ಸದಸ್ಯತ್ವವು ಒಂದು ವರ್ಷದ ಯೋಜನೆಗೆ ಒಬ್ಬರಿಗೆ 300 ಕುಟುಂಬಕ್ಕೆ ಅಂದರೆ ಕಾರ್ಡುದಾರ ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ 600 ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ ತಾಯಿ ಅತ್ತೆ ಮಾವ) ರು 750 ಇದೊಂದು ಹೆಚ್ಚವರಿ ಲಾಭವಾಗಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ಕುಟುಂಬಕ್ಕೆ 800 ಕುಟುಂಬ ಪ್ಲಸ್ ಯೋಜನೆಗೆ 950 ಇರುತ್ತದೆ ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ನ್ನು ಒಂದು ಅಥವಾ 2 ವರ್ಷದ ಅವಧಿಗೆ ಎಷ್ಟು ಬಾರಿಯಾದರೂ ಉಪಯೋಗಿಸಬಹುದು. ಕೊವಿಡ್ ರೋಗಿಗಳಿಗೆ ಜನರಲ್ ವಾರ್ಡನಲ್ಲಿ ಸರ್ಕಾರ ಅನುಮೋದಿತ ಪ್ಯಾಕೇಜ್ ಮೇಲೆ 10ಅ ರಿಯಾಯತಿ, ವೈದ್ಯರ ಸಮಾಲೋಚನೆ 50ಅ ರಿಯಾಯತಿ, ಪ್ರಯೋಗಾಲಯ ಪರೀಕ್ಷೆ 30ಅ ರಿಯಾಯತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುವನ್ನು ಹೊರತುಪಡಿಸಿ 25ಅ ರಿಯಾಯತಿ, ಸಿಟಿ, ಎಂಆರ್ಐ, ಅಲ್ಟ್ರಾ ಸೌಂಡ್ 20ಅ ರಿಯಾಯತಿ, ಹೊರ ರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20ಅ ರಿಯಾಯತಿ, ಓಷದಾಲಯಗಳಲ್ಲಿ 12ಅ ವರೆಗೆ ರಿಯಾಯತಿ ಪಡೆಯಬಹುದು. ಕಾರ್ಡ ಪಡೆಯಲಿಚ್ಚಿಸುವವರು ಮೊ. 9513652233, 9481715961, 8105811327, 9844405075, 9606007534 ಸಂಪರ್ಕಿಸಬೇಕು ಎಂದು ಸಚಿನ ಕಾರಂತ ಹೇಳಿದರು.
ಉಪವ್ಯವಸ್ಥಾಪಕ ಮೋಹನ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಕೃಷ್ಣಪ್ರಸಾದ.ಬಿಎಸ್, ಮಾರುಕಟ್ಟೆ ವಿಭಾಗದ ಪ್ರತಿನಿಧಿ ಅನೀಲ ನಾಯಕ, ಕೆಂಚನಗೌಡ ಕ.ಬಿ, ಡಾಽಎಚ್.ವಿ.ಉಮೇಶ, ಮಾಲತೇಶ ವಭೂತಿ, ಗಿರಿಶೇಖರ ವಿಭೂತಿ ಇದ್ದರು.