ಅಭಿವೃದ್ಧಿ ಕಾಮಗಾರಿಗಳಿಗೆ ಕಾರದಗಿ ಭೂಮಿ ಪೂಜೆ
ಲೋಕದರ್ಶನ ವರದಿ
ಸವದತ್ತಿ 04: ಪಟ್ಟಣದ ಎಸ್.ಎಲ್.ಎ.ಓ ಕ್ರಾಸ್ದಿಂದ ಪೋಸ್ಟ್ ಆಫೀಸ್ವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಎಲ್ಲ ವಾರ್ಡಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಹೇಳಿದರು.
ಸ್ಥಳೀಯ ಎಸ್.ಎಲ್.ಎ.ಓ ಕ್ರಾಸ್ನಲ್ಲಿ ದಿ. ಆನಂದ ಚಂ. ಮಾಮನಿ, ವಿಧಾನಸಭೆ ಉಪಸಭಾಧ್ಯಕ್ಷ ಇವರು 2022-23 ರ ಸಾಲಿನ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಹಂತ-4 ರ ಅನುದಾನಡಿ ಮಂಜೂರು ಮಾಡಿದ 4.61ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದ ಶುಚಿತ್ವಕ್ಕೆ ವಿಶೇಷ ಆದ್ಯತೆ ನೀಡುವದರ ಜೊತೆಗೆ ವಾರ್ಡಗಳಲ್ಲಿನ ಚರಂಡಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಡಾ.ಎನ್.ಸಿ ಬೆಂಡಿಗೇರಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಅರ್ಜುನ ಅಮ್ಮೋಜಿ, ಬಾಬು ಕಾಳೆ, ಮೌಲಾಸಾಬ ತಬ್ಬಲಜಿ, ವಿರೇಂದ್ರ ಪ್ರಭುನವರ, ಲಕ್ಷ್ಮಣರಾವ್ ಕುಲಕರ್ಣಿ, ಶಿವಾನಂದ ಪಟ್ಟಣಶೆಟ್ಟಿ, ಶ್ರೀಶೈಲ ಕಾರದಗಿ, ಮಹಾಂತೇಶ ಪಂಪನವರ, ಯಲ್ಲಪ್ಪ ರುದ್ರಾಕ್ಷಿ, ನಿಂಗಪ್ಪ ಬೆಟಸೂರ, ಬಿ.ಎನ್.ಹೊಸೂರ, ವಸಂತಪ್ರಸಾದ ರೆವಡಿ, ಪುರಸಭೆ ಮುಖ್ಯಾಧಿಕಾರಿ ಪಿ.ಎಮ್.ಚನ್ನಪ್ಪನವರ, ಅಭಿಯಂತರ ಎಚ್.ಎ.ಕದ್ರಾಪುರ, ಗುತ್ತಿಗೆದಾರ ಪ್ರಕಾಶ ಎಸ್ ಅಂಚಿ ಇತರರು ಉಪಸ್ಥಿತರಿದ್ದರು.