ಕರಬಸಪ್ಪ ಮಲ್ಲಿಕಾರ್ಜುನಪ್ಪ ಮಾಮನಿ ನಿಧನ
ಸವದತ್ತಿ 22: ಪಟ್ಟಣದ ಮಾಮನಿ ಮನೆತನದ ಹಿರಿಯರಾದ ಕರಬಸಪ್ಪ ಮಲ್ಲಿಕಾರ್ಜುನಪ್ಪ ಮಾಮನಿ (92) ನಿಧನರಾಗಿರುತ್ತಾರೆ.
ಮೃತರು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರ ದೊಡ್ಡಪ್ಪ ಹಾಗೂ ಮಾಜಿ ಶಾಸಕ ದಿ.ರಾಜಣ್ಣ ಮಾಮನಿಯವರ ತಂದೆಯವರಾಗಿದ್ದಾರೆ. ಪತ್ನಿ, ಪುತ್ರರಾದ ವಿರುಪಾಕ್ಷ ಮತ್ತು ಡಾ.ಮನೋಹರ ಹಾಗೂ ಇಬ್ಬರು ಪುತ್ರಿಯರನ್ನು, ಮೊಮ್ಮಗ ಐ.ಆರ್.ಎಸ್ ಅಧಿಕಾರಿ ಮಲ್ಲಿಕಾರ್ಜುನ ಮಾಮನಿ ಸೇರಿದಂತೆ ಅಪಾರ ಬಂಧುಗಳನ್ನು ಮೃತರು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಶುಕ್ರವಾರದಂದು ಪಟ್ಟಣದ ಕೆಂಚಲಾರಕೊಪ್ಪದ ಮಾಮನಿಯವರ ತೋಟದ ಜಮೀನದಲ್ಲಿ ನಡೆಯಿತು. ತಾಲೂಕಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.