ಕನ್ನಡ ನಮ್ಮ ಭಾಷೆ : ಪಾಟೀಲ
ಸಿಂದಗಿ : ಕನ್ನಡ ನಮ್ಮ ಭಾಷೆ. ಈ ಭಾಷೆಯ ಕಾಗುಣಿತ, ಅಮ್ಮ ಅನ್ನುವ ಪದ ಎಲ್ಲವೂ ಸೊಗಸು. ಕನ್ನಡವನ್ನು ನಾವು ತುಂಬಾ ಪ್ರೀತಿಸುತ್ತೇವೆ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.
ಪಟ್ಟಣದ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ನಮ್ಮ ರಾಜ್ಯದ ನಕಾಶೆ ಬೇರೆ ರಾಜ್ಯಗಳ ನಕಾಶೆಗಿಂತ ಸುಂದರ. ಇವತ್ತು ಕಾಡು, ಗುಡ್ಡ, ಪ್ರಕೃತಿಯನ್ನು ತುಂಬ ಬಿಂಬಿಸುತ್ತದೆ. ನಾವು ಕನ್ನಡದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಪ್ರತಿಯೊಂದು ಸೋಲು ಗೆಲುವಿಗೂ ಕನ್ನಡ ಮಾಧ್ಯಮ. ದೇಹದಲ್ಲಿ ಹೃದಯ, ರಕ್ತ ಎಷ್ಟು ಮುಖ್ಯವೋ ಮಾತನಾಡಲು ಕನ್ನಡವೂ ಅಷ್ಟೇ ಮುಖ್ಯ. ಬದುಕು ಸಾಗಿಸಲು ದಿನನಿತ್ಯದ ಆಗುಹೋಗುಗಳಿಗೆ ಎಲ್ಲದಕ್ಕೂ ಕನ್ನಡ ಮುಖ್ಯ ಎಂದರು.
ಹಿರಿಯ ಉಪನ್ಯಾಸಕರಾದ ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಶಿವಶರಣ ಬೂದಿಹಾಳ, ಎಸ್.ಎಚ್.ಜಾಧವ, ಎಸ್.ಸಿ.ಜೋಗೂರ, ಸಂಗಮೇಶ ಚಾವರ, ಎನ್.ಎಂ.ಶೆಳ್ಳಗಿ, ಗವಿಸಿದ್ದಪ್ಪ ಆನೆಗುಂದಿ, ಶಿವರಾಜ ಕುಂದಗೋಳ, ವಿಶ್ವನಾಥ ನಂದಿಕೋಲ, ಆರ್.ಎಂ.ಕೊಳ್ಳೂರೆ, ರಾಜಶ್ರೀ ಗಾಣಗೇರ್, ಜೆ.ಎಂ.ಗಾಣಗೇರ್, ಅಡಿವೆಪ್ಪಾ ದಸ್ಮಾ, ಚಂದ್ರು ಬಬಲೇಶ್ವರ್, ಎಸ್.ಜಿ.ಮಾರ್ಸನಳ್ಳಿ, ಚಂದ್ರಕಾಂತ ರಾಠೋಡ, ಸೇರಿದಂತೆ ಇನ್ನಿತರರು ಇದ್ದರು.