ಕನ್ನಡ ರಾಜ್ಯೋತ್ಯವ ಆಚರಣೆ
ಶಿಗ್ಗಾವಿ 02: ತಾಲೂಕಿನ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆ-ಶಿವಪೂರ ದಲ್ಲಿ ಕನ್ನಡಾಂಬೆಯನ್ನು ಪೂಜಿಸುವುದರೊಂದಿಗೆ ಕನ್ನಡರಾಜ್ಯೋತ್ಯವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಎರೇಸೀಮೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಪರಶುರಾಮ ಹಿರೂಲಾಲ, ಮಲ್ಲನಗೌಡ ಪಾಟೀಲ, ಮನ್ಸುರ ಅಲಿ ನಿಲಯ ಪಾಲಕರು ಮತ್ತು ಎಲ್ಲಾ ಸಹಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಗೀತಾ ಬಾರ್ಕಿ ಎಂಬ ವಿದ್ಯಾರ್ಥಿನಿ ಸ್ವಾಗತಿಸಿದಳು. ಶಿಕ್ಷಕರಾದ ಗಂಗಾ ಬನಾಜಿ ಮತ್ತು ಮನ್ಸೂರಕಿ ಅವರು ಕನ್ನಡಾಂಬೆ ಮತ್ತು ಕನ್ನಡ ರಾಜ್ಯೋತ್ಸವ ಕುರಿತು ಸವಿಸ್ತಾರವಾಗಿ ವಿವರಿಸಿದರು. ಮಕ್ಕಳು ಕನ್ನಡಾಂಬೆ ದೇಶಭಕ್ತಿ ಕುರಿತಾದ ಭಾಷಣ ಮತ್ತು ಗೀತೆಗಳನ್ನು ಹೇಳಿದರು.