ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕನ್ನಡ ರಾಜ್ಯೋತ್ಸವ
ರಾಣೆಬೆನ್ನೂರು 03: ವಾಗೀಶ ನಗರದ, ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ, ಮಂಗಳವಾರ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನೆರವೇರಿಸಲಾಯಿತು. ಕಸಾಪ ತಾಲೂಕ ಅಧ್ಯಕ್ಷ ವೀರೇಶ ಜಂಬಿಗಿ, ಅವರು 67ನೇ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ವರ್ತಕ ಜಿ.ಜಿಹೊಟ್ಟಿಗೌಡ್ರ, ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ, ಪ್ರಭಾಕರ ಶಿಗ್ಲಿ, ಡಾ:ಕೆ.ಹೆಚ್. ಮುಕ್ಕಣ್ಣನವರ್, ಹೆಚ್ ಎಸ್ ಮುದಿಗೌಡಡ್ರ, ಬಿ.ಬಿ. ಶಿವಾನಂದ, ಎಫ್ಎಂ ಕಡಕೋಳ, ಇಂದಿರಾ ಬಾರಂಗಿ, ಚಂದ್ರಶೇಖರ, ಜಿ. ವ್ಹಿ,ಶಿರಹಟ್ಟಿ ಮಡಿವಾಳರ, ಹೆಚ್ ಹೆಚ್ ಜಾಡರ, ಸೇರಿದಂತೆ ತಾಲೂಕ ಘಟಕದ ಪದಾಧಿಕಾರಿಗಳು, ಕವಿಗಳು, ಸಾಹಿತಿಗಳು, ಕಲಾವಿದರು, ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು