ಶಿಗ್ಗಾವ್

ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ

ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ

ಶಿಗ್ಗಾವಿ 28 : ಮಂಡ್ಯದಲ್ಲಿ ನಡೆಯುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ, ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನ ತಾಲೂಕಾಡಳಿತದ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. 

ಪಟ್ಟಣದ ಗಂಗೇಬಾವಿ ಕ್ರಾಸ್‌ಗೆ ಆಗಮಿಸಿದ ರಥವನ್ನ ತಹಶೀಲ್ದಾರ ಸಂತೋಷ ಹಿರೇಮಠ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅದ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಕಸಾಪ ಅದ್ಯಕ್ಷ ನಾಗಪ್ಪ ಬೆಂತೂರ ಸೇರಿದಂತೆ ತಾಲೂಕಿನ ಕನ್ನಡ ಪರ ಹೋರಾಟಗಾರರು, ರೈತ ಮುಖಂಡರು, ಸಾಹಿತ್ಯ ಪರಿಷತ್‌ನ ಸದಸ್ಯರು ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿ ವಿದ್ಯಾರ್ಥಿಗಳು ಸ್ವಾಗತಿಸಿದರು. 

ನಂತರ ರಥಯಾತ್ರೆಯು ಪಟ್ಟಣದ ಪೋಷ್ಟ್‌ ಆಪೀಸ್, ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಕಿತ್ತೂರಾಣಿ ಚನಮ್ಮ ಸರ್ಕಲ್‌ಗೆ ಬಂದು ಸೇರಿತು, ಮೆರವಣಿಗೆಯಲ್ಲಿ ಕುಂಬ ಹೊತ್ತ ಮಹಿಳೆಯರು ಮೆರಗುತಂದರೆ, ಕನ್ನಡ ಪರ ಹೋರಾಟಗಾರರು ಜಾಂಜ್ ಮೇಳಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. 

ನಂತರ ರಥಯಾತ್ರೆಯನ್ನು ಉದ್ದೇಶಿಸಿ ತಹಶೀಲ್ದಾರ ಸಂತೋಷ ಹಿರೇಮಠ ಮಾತನಾಡಿ, ಪ್ರತಿಯೋಬ್ಬರಲ್ಲೂ ಕನ್ನಡತನವನ್ನ ನಾವೆಲ್ಲರೂ ಇಂದು ಬಿತ್ತಬೇಕಿದ್ದು, ಕನ್ನಡವು ನಮ್ಮೇಲ್ಲರ ಉಸಿರಾಗಬೇಕಿದೆ, ಕನ್ನಡ ಭಾಷೆಯನ್ನ ಪ್ರೀತಿಸಿ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನ ಪ್ರೀತಿಸುವ ಹೊಣೆ ನಮ್ಮದಾಗಿದೆ ಎಂದರು. 

ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ನ್ಯಾಯವಾದಿಗಳಾದ ಹನುಮಂತಪ್ಪ ಬಂಡಿವ್ಡರ ಹಾಗೂ ಸಂತೋಷಗೌಡ ಪಾಟೀಲ ಮಾತನಾಡಿದರು. 

ಮೆರಣಿಗೆಯಲ್ಲಿ ಜಿಲ್ಲಾ ಬ್ಲಾಕ್ ಅದ್ಯಕ್ಷ ಸಂಜೀವಕುಮಾರ ನೀರಲಗಿ, ಫಕ್ಕೀರ​‍್ಪ ಕುಂದೂರ, ರಮೇಶ ಸಾತಣ್ಣವರ, ಎಸ್ ಎಫ್ ಮಣಕಟ್ಟಿ, ಸಿಡಿಪಿಓ ಗಣೇಶ ಲಿಂಗನಗೌಡ್ರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಹಕ್ಕರಕಿ, ಸರಸ್ವತಿ ಗಜಾಕೋಷ, ಮಂಜುನಾಥ ಮಣ್ಣಣ್ಣವರ, ಹನುಮಂತಪ್ಪ ಬಂಡಿವಡ್ಡರ, ಪ್ರೋ. ಶಿವಯ್ಯ ಪೂಜಾರ, ಸಂತೋಷಿ ಮಾತಾ, ಡಾ. ಮಲ್ಲೇಶಪ್ಪ ಹರಿಜನ, ಬಸಲಿಂಗಪ್ಪ ನರಗುಂದ, ಶಂಬು ಕೇರಿ, ಸಲಿಂ ದುಖಾಂದಾರ, ಈರಣ್ಣ ಸಮಗೊಂಡ, ಬಸವರಾಜ ಜೇಕಿನಕಟ್ಟಿ, ಪೀರಸಾಬ್ ನದಾಫ್, ಹನುಮಂತಪ್ಪ ಮಾದರ, ಬಸವರಾಜ ಗೊಬ್ಬಿ, ಯಲ್ಲಪ್ಪ ಶಿಂದೆ ಸೇರಿದಂತೆ ತಾಲೂಕಿನ ಸಾಹಿತ್ಯಾಸಕ್ತರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು ಹಾಗೂ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.    


ಸುದ್ದಿ ಓದಿ