ಕನೇರಿ ಮಠದ ಓಷಧವು ಜಾನುವಾರುಗುಳಿಗೆ ಸಂಜೀವಿನಿ: ಪಾಟೀಲ
ಬೈಲಹೊಂಗಲ 12: ಕನೇರಿ ಮಠದ ಓಷಧವು ಚರ್ಮ ಗಂಟು ರೋಗ ಹೋಗಲಾಡಿಸಲು ಜಾನುವಾರಗುಳಿಗೆ ಸಂಜೀವಿನಿಯಾಗಿದ್ದು, ರೈತರು ಇದರ ಅನುಕೂಲ ಪಡೆದುಕೊಳ್ಳಬೇಕೆಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ಮತಕ್ಷೇತ್ರದ ಚಚಡಿ, ತಡಸಲೂರ ಗ್ರಾಮದ ರೈತರಿಗೆ ಕನೇರಿ ಮಠದಲ್ಲಿ ತಯಾರಿಸಿದ ದಿವ್ಯ ಓಷಧಿಯನ್ನು ತರಿಸಿಕೊಂಡು ಉಚಿತವಾಗಿ ವಿತರಣೆ ಮಾಡಿ ಮಾತನಾಡಿ, ಕನೇರಿ ಮಠದ ಅದೃಶ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಕರೋನಾ ಸಂದರ್ಭದಲ್ಲಿ ಒಂದೂವರೆ ಕೋಟಿ ಜನರಿಗೆ ಓಷಧ ನೀಡಿದ್ದು ಇತಿಹಾಸವಾಗಿದ್ದು, ಗೋ ರಕ್ಷಣೆ, ಸಾವಯವ ಕೃಷಿ ಬೆಳವಣಿಗೆಯೊಂದಿಗೆ, ಈಗ ದನಕರುಗಳ ಕಾಳಜಿ ವಹಿಸುತ್ತಿರುವದು ಅವರ ಗೋ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಚರ್ಮಗಂಟು ರೋಗದ ನಿರ್ಲಕ್ಷ ಬೇಡ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರದಂತೆ, ರೋಗ ಹರಡದಂತೆ ಸ್ವಚ್ಚತೆ ಹಾಗೂ ಕಾಳಜಿ ವಹಿಸಬೇಕು ಎಂದರು. ನೂತನ ಎಸ್.ಡಿ.ಎಂ.ಸಿ. ಸದಸ್ಯರನ್ನು ಸನ್ಮಾನಿಸಲಾಯಿತು.
ಬಸನಗೌಡ ಪಾಟೀಲ, ಯಲ್ಲಪ್ಪ ಮೇಟಿ, ಬಸಯ್ಯ ಪೂಜೇರಿ, ನಿಂಗಪ್ಪ ಪಾಟೀಲ, ಮುದುಕಪ್ಪ ಮೇಟಿ, ವೀರಭದ್ರ್ಪ ಶಿಂಗಾರಿ, ಶಂಕ್ರಯ್ಯ ಗಣಾಚಾರಿ, ದುಂಡಪ್ಪ ಗಿರಿಜನ್ನವರ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ನೇಸರಗಿ, ನಾರಾಯಣ ರಣಸಿಂಗ, ವಿಜಯ ಪತ್ತಾರ, ಶಿವಪ್ರಸಾದ ಪಾಟೀಲ, ಸುನೀಲ ಹಲಗಿ, ಭದ್ರಯ್ಯ ಹಿರೇಮಠ, ಬೀರ್ಪ ಕುರೇರ, ಈರಣ್ಣ ಹುಬ್ಬಳ್ಳಿ, ಶಿವಪ್ಪ ಹುಂಡೇಕರ, ರಾಮಚಂದ್ರ ಚನ್ನಮ್ಮನವರ, ಬಸಪ್ಪ ಮಾಳಗಿ, ಮಲ್ಲಿಕಾರ್ಜುನ ಕೆಂಗೇರಿ, ಗೌಡೇಶ ಪಾಟೀಲ ನೂರಾರು ರೈತರು ಇದ್ದರು.