ಬಳ್ಳಾರಿ

ಕಂದಕೂರು ರಾಮುಡು ನೇಮಕ

ಕಂದಕೂರು ರಾಮುಡು ನೇಮಕ

ಬಳ್ಳಾರಿ 28: ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಚಾಲಕ, ಕೆ ರಾಜುರವರ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ, ವಿಭಾಗದ ಅಧ್ಯಕ್ಷ ರಾಜೇಶ್ ಅಲೋತಿಯ ಅವರ ಆದೇಶದ ಮೇರೆಗೆ ಕೆಪಿಸಿಸಿ ಸಮಿತಿಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಪರಿಶಿಷ್ಟ ಜಾತಿಯ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.  

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಮತ್ತು ಅಹಿಂದ ಸಮಾಜದ ಪರಿಶಿಷ್ಟ ಜಾತಿಯಲ್ಲಿ ಕುಂದಕುರ್ ರಾಮುಡು ಅವರು ಪಕ್ಷಕ್ಕೆ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ತಮ್ಮ ಬಳಿ ಬಂದವರನ್ನು ಎಂದು ಮರಳಿಕಳಿಸದೆ ಸಮಸ್ಯೆಯೆಂದು ಬಂದವರನ್ನು ಪೂರ್ಣ ಮಾಹಿತಿ ತಿಳಿದುಕೊಂಡು ಬಂದಂತಹ ಜನರ ಕಷ್ಟವನ್ನು ತಮ್ಮ ಸ್ವತಹ ಖರ್ಚಿನಲ್ಲಿ  ಕೆಲಸ ಮಾಡಿಸಿ ಬಂದಂತಹ ಜನರಿಗೆ ಊಟ ಉಪಚಾರ ಮಾಡಿಸಿ ಸೂಕ್ತವಾಗಿ ಹೋಗಿಬನ್ನಿ ಎಂದು ಶುಭ ಹಾರೈಸುತ್ತಿದ್ದರು. ಇಂತಹ ಮಾನವೀಯ ಮೌಲ್ಯ ಗುಣಗಳು, ಇವರು ಮಾಡುವಂತಹ ಕೆಲಸವನ್ನು ಗುರುತಿಸಿ ಕೆಪಿಸಿಸಿಯ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯ ಕಂದಕೂರು ರಾಮುಡು ಅವರಿಗೆ ಆದೇಶ ಹೊರಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ