ಜಾತಿ ಪದ್ಧತಿ ವಿರೋಧಿಸಿದ ಕನಕರು : ಉಮಾಪತಿ
ಹೊಸಪೇಟೆ 12: ಜಾತಿ ಪದ್ಧತಿಯನ್ನು ಅತ್ಯಂತ ಪ್ರಭಲವಾಗಿ ವಿರೋಧಿಸಿದವರೆಂದರೆ ಕನಕದಾಸರು ಎಂದು ಬಿಜೆಪಿ ಹೊಸಪೇಟೆ ಮಂಡಲ ಅಧ್ಯಕ್ಷ ಕಾಸಿಟ್ಟಿ ಉಮಾಪತಿ ತಿಳಿಸಿದರು.
ಪಟೇಲ್ ನಗರದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 523ನೇ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.
ಹರಿದಾಸರಾಗಿದ್ದ ಕನಕರು ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದರು. ಮಧ್ವ ತತ್ವಶಾಸ್ತ್ರವನ್ನು ಅವರು ಮೆಚ್ಚಿಕೊಂಡಿದ್ದರು. ಅವರು ಜಾತಿ ಅಸಮಾನತೆಯನ್ನು ಅತ್ಯಂತ ತೀಕ್ಷ್ಣವಾಗಿ ತಮ್ಮ ಕೀರ್ತನೆಗಳಲ್ಲಿ ವಿರೋಧಿಸಿದರು ಎಂದು ಜಿಲ್ಲಾ ಕೈಗಾರಿಕೆ ಪ್ರಕೋಷ್ಠದ ಸಹಸಂಚಾಲಕ ಬೋಯ ಉಮೇಶ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾದ ತಾಲೂಕು ಪ್ರಅಧಾನ ಕಾರ್ಯದರ್ಶಿ ಕುಮಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.