ರಾಣೆಬೆನ್ನೂರ

ಕಲಿಯುಗದ ಕಾಮಧೇನು ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು: ಹೊನ್ನಾಳಿ ಶ್ರೀಗಳು

ಕಲಿಯುಗದ ಕಾಮಧೇನು ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು: ಹೊನ್ನಾಳಿ ಶ್ರೀಗಳು

ರಾಣೇಬೆನ್ನೂರ 20:   ಲಿಂಗೈಕ್ಯ ಹೊನ್ನಾಳಿ ಹಿರೇಕಲ್ಮದ ಶ್ರೀ ಚಂದ್ರಶೇಖರ ಶಿವಾಚಾರ್ಯರು ರಾಣೆಬೆನ್ನೂರು ತಾಲೂಕಿನ ಭಕ್ತರಿಗೆ ಪರಮಪ್ರಿಯರಾಗಿದ್ದರು. ಶಿಕ್ಷಕರು, ವರ್ತಕರು, ಸಾಹಿತಿಗಳು,  ವೈದ್ಯರು, ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರ ಹೃದಯ ಸಾಮ್ರಾಜ್ಯದಲ್ಲಿ ಮನೆ ಮಾಡಿದವ ರಾಗಿದ್ದರು. ಅಂತಹ ಶರಣರು ಅಂದಿಗೂ, ಇಂದಿಗೂ,ಎಂದೆಂದಿಗೂ ನಮ್ಮ ಮಧ್ಯೆ ಇದ್ದಾರೆ ಇರುತ್ತಾರೆ ಎಂದು ಹೊನ್ನಾಳಿ ಹಿರೇಕಲ್ಠಠದ ಶ್ರೀ ಷ. ಬ್ರ. ಡಾ: ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.  

ಅವರು ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠ ಸಭಾಭವನದಲ್ಲಿ ಇತ್ತೀಚೆಗೆ ನಡೆದ 280ನೇ ಜ್ಞಾನವಾಹಿನಿ, ಲಿಂಗೈಕ್ಯ ಚಂದ್ರಶೇಖರ್ ಶಿವಾಚಾರ್ಯರ ಸ್ಮರಣೋತ್ಸವ ಧಾರ್ಮಿಕ ಜಾಗ್ರತಿ  ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು ತಮ್ಮ ಜೀವಿತ ಬದುಕಿನಲ್ಲಿ ಯಾವುದೇ ಜಾತಿ,ಮತ, ಪಂಥ, ಬೇಧ,ಭಾವ  ತೋರದೆ, ಧರ್ಮದ ಅನುಯಾಯಿಗಳು ಮಾಡಬೇಕಾದ ಪವಿತ್ರ ಸೇವಾ ಕಾರ್ಯವನ್ನು ಮಾಡುವುದರ ಮೂಲಕ ಸಕಲ ಭಕ್ತರಿಗೂ ಲೇಶನ್ನು ಬಯಸಿದ ಮಹಾನ್ ಗುರುವಾಗಿದ್ದರು ಎಂದರು.  

ಚಂದ್ರಶೇಖರ ಶ್ರೀಗಳು ರಾಣೆಬೆನ್ನೂರಿನ ಭಕ್ತರಿಗೆ ಅತ್ಯಂತ ಪ್ರೀತಿ ಪಾತ್ರರು.  ವೃತ್ತಿಪರರನ್ನು ಒಬ್ಬ ಗುರುವಾಗಿ,ತಂದೆಯಾಗಿ, ತಾಯಿಯಾಗಿ, ಲಕ್ಷಾಂತರ ಭಕ್ತರ ಪ್ರೀತಿ,ವಿಶ್ವಾಸ ಗಳಿಸಿ,ಭಕ್ತರನ್ನು ಸಲಹಿ ಮಾರ್ಗದರ್ಶನದ ಮೂಲಕ ಧರ್ಮ ಜ್ಞಾನ ಜ್ಯೋತಿಯಾಗಿದ್ದರು ಎಂದು ಶ್ರೀಗಳು ನುಡಿದರು. ಸಮನ್ವಯಾಚಾರ್ಯರು ವಿಷಯವಾಗಿ ಚನ್ನಬಸವ ಪ್ರಶಸ್ತಿ ಪುರಸ್ಕೃತರಾದ ಹೆಚ್‌.ಎ.ಭಿಕ್ಷಾವರ್ತಿ ಮಠ ಅವರು ಉಪನ್ಯಾಸ ನೀಡಿ, ವ್ಯಕ್ತಿಗೆ ಜಯವಲ್ಲ,ಜಾತಿಗೆ ಜಯವಲ್ಲ, ಧರ್ಮಕ್ಕೆ ಜಯವಲ್ಲ, ಸಮಗ್ರ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಸಂದೇಶ ಪರಂಪರೆಯನ್ನು ನೀಡಿರುವ ಶ್ರೀಗಳವರ ಧರ್ಮದ ಹಾದಿ ಎಂದಿಗೂ ಪ್ರಸ್ತುತವಾಗಿದೆ ಎಂದರು.  

ವೇದಿಕೆಯಲ್ಲಿ ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜ್ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಹಾಲಪ್ಪ ಮುದ್ದಿ, ಗೌರವ ಕಾರ್ಯದರ್ಶಿ ಪುಟ್ಟನ ಗೌಡ ತೆಂಬದ, ನೂತನ ನಿರ್ದೇಶಕರಾದ, ಈರಣ್ಣ ಐ.ಶೆಟ್ಟರ್, ರಾಜಶೇಖರ ಹಾದಿಮನಿ, ಸುರೇಶ ಸಣ್ಣಗೌಡ್ರ, ವಿಜಯ್ ಕಬ್ಬಿಣದ, ಸುರೇಶ್ ಗೌಡ್ರು ಮಾಳಗಿ, ಶಿವಯೋಗಿ ಅಂಗಡಿ, ಮೃತ್ಯುಂಜಯ ಪಾಟೀಲ್, ನಾಗರಾಜ್ ಅಂಗಡಿ, ಪ್ರಭ ಚಿನ್ನಿಕಟ್ಟಿ, ಕೋಮಲಕುಮಾರ್ ಕೋರಿ ಶೆಟ್ರ, ಮಂಜುನಾಥ ಸಿ.ಗೌಡಶಿವಣ್ಣನವರ, ಬಸವರಾಜ ನರಸಗೊಂಡರ, ವಾದಿರಾಜ ಕುಲಕರ್ಣಿ, ಸಿದ್ದಣ್ಣ ಶಿವಲಿಂಗಪ್ಪನವರ, ಮೊದಲಾದವರನ್ನು ಶ್ರೀಗಳು ಗುರು ರಕ್ಷೆ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ಎನ್‌. ನೆಗಳೂರಮಠ, ಬ್ಯಾಡಗಿ ವರ್ತಕ  ನಾಗರಾಜಪ್ಪ ಕೆಂಬಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ ಎನ್‌. ಶಿಗ್ಲಿ,ಗೌರಮ್ಮ,  ವೀರಣ್ಣ ಲೆಕ್ಕದಪ್ಪ ಜಂಬಗಿ,  ಸುರೇಶ್ ಬ. ಮಳೀಮಠ,ಶಿವಯೋಗಿ ಎಸ್‌. ಹಿರೇಮಠ, ಜಗದೀಶ ಮಳಿಮಠ, ವ್ಹಿ.ಎಂ. ಕರ್ಜಗಿ, ಸೋಮನಾಥ ಹಿರೇಮಠ, ಚನ್ನವೀರಗೌಡ ಪಾಟೀಲ್,ರಾಚಯ್ಯ ಶಾಸ್ತ್ರಿ, ಗೌರಿಶಂಕರ ನೆಗಳೂರುಮಠ, ಸುನಂದಮ್ಮ ತಿಳುವಳ್ಳಿ, ಗಾಯತ್ರಮ್ಮ ಕುರುವತ್ತಿ, ಭಾಗ್ಯಶ್ರೀ ಗುಂಡಗಟ್ಟಿ ಇತರರು  ಉಪಸ್ಥಿತರಿದ್ದರು. ಕಲಾವಿದರಾದ  ಗುಡ್ಡಪ್ಪ ಹಿಂದಿನಮನಿ , ಮೌನೇಶ ತ್ರಾಸದ,   ರಜನಿ ಕರಿಗಾರ,  ಯುವರಾಜ್  ಹಿರೇಮಠ ಅವರು ಸಂಗೀತ ಸೇವೆ ಸಲ್ಲಿಸಿದರು. ಶ್ರೀಮಠದ ಕಾರ್ಯದರ್ಶಿ  ಅಮೃತ ಗೌಡ ಹಿರೇಮಠ, ಸ್ವಾಗತಿಸಿದರು.   ಶ್ರೀಮತಿ ಕಸ್ತೂರಮ್ಮ ಪಾಟೀಲ್ ನಿರೂಪಿಸಿ, ಎಂ. ಕೆ. ಹಾಲುಸಿದ್ದಯ್ಯ ಶಾಸ್ತ್ರಿ ವಂದಿಸಿದರು. 


ಸುದ್ದಿ ಓದಿ