ಕಲ್ಪವೃಕ್ಷ ಮಾದರಿ ಶಾಲೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಶೇ.100 ಸಾಧನೆ

ಬೈಲಹೊಂಗಲ 14: ಪ್ರತಿಷ್ಠಿತ ಕಲ್ಪವೃಕ್ಷ ಮಾದರಿ ಶಾಲೆಯ ಸಿಬಿಎಸ್ಇ 12ನೇ ತರಗತಿಯ ಪ್ರಥಮ ಬ್ಯಾಚ್ದ ಫಲಿತಾಂಶ ಶೇ.100 ರಷ್ಟಾಗಿದೆ.
ಶಿವಾನಿ ಸೊಂಟಕ್ಕಿ ಶೇ.87, ನಿರಾಲಿ ರಾಜಪುರೋಹಿತ ಶೇ.80 ಹಾಗೂ ಶಶಾಂಕ ಸೊಂಟಕ್ಕಿ ಶೇ.80 ಅಂಕಗಳನ್ನು ಗಳಿಸಿ ಸಾಧನೆಗೈದಿದ್ದಾರೆ.
ಒಟ್ಟು 14 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಶೇ.80ಕ್ಕಿಂತ ಹೆಚ್ಚು, 4 ವಿದ್ಯಾರ್ಥಿಗಳು ಶೇ.70ಕ್ಕಿಂತ ಹೆಚ್ಚು, 6 ವಿದ್ಯಾರ್ಥಿಗಳು ಶೇ,60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ಪ್ರಾರಂಭಿಸಲಾದ ಪ್ರಥಮ ಬ್ಯಾಚ್ದ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಢಮ್ಮಣಗಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಹಾಗೂ ಶಿಕ್ಷಕ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.