ಕಲಾಂ ಜನ್ಮದಿನ : ಪ್ರಧಾನಿ ಮೋದಿ, ಅಮಿತ್ ಶಾ ಶ್ರದ್ಧಾಂಜಲಿ
ನವದೆಹಲಿ, ಅ 15: ಮಾಜಿ ರಾಷ್ಟ್ರಪತಿ ಡಾ.ಎಜೆಪಿ ಅಬ್ದುಲ್ ಕಲಾಂ ಅವರ 89 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಗುರುವಾರ ಗೌರವ ಸಲ್ಲಿಸಿದ್ದಾರೆ. "ಡಾ. ಕಲಾಂ ಅವರ ಜಯಂತಿಯಂದು ಅವರಿಗೆ ಗೌರವ ಅರ್ಪಿಸುವೆ. ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ದೇಶದ ಅಭಿವೃದ್ಧಿಗೆ ಅವರು ನೀಡಿದ ಅಳಿಸಲಾಗದ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜೀವನವು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ, "ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ದೂರದೃಷ್ಟಿಯ ನಾಯಕ ಮತ್ತು ಭಾರತದ ಬಾಹ್ಯಾಕಾಶ ಮತ್ತು ಕ್ಷಿಪಣಿ ಕಾರ್ಯಕ್ರಮಗಳ ವಾಸ್ತುಶಿಲ್ಪಿ, ಸದಾ ಸದೃಢ ಮತ್ತು ಸ್ವಾವಲಂಬಿ ಭಾರತ ನಿರ್ಮಿಸಲು ಬಯಸಿದ್ದರು. ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅಮರ ಪರಂಪರೆ ಸ್ಫೂರ್ತಿಯ ಸೆಲೆಯಾಗಿದೆ. "ಎಂದು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದಿವಂಗತ ಡಾ.ಕಲಾಮ್ ಅವರನ್ನು ಸ್ಮರಿಸಿದ್ದಾರೆ. 'ಕ್ಷಿಪಣಿ ಮನುಷ್ಯ' ಎಂದೂ ಕರೆಯಲ್ಪಡುವ ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ ಅವರು ಏರೋಸ್ಪೇಸ್ ವಿಜ್ಞಾನಿ ಮತ್ತು ರಾಜಕಾರಣಿಯಾಗಿದ್ದರು, ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು 2010 ರಲ್ಲಿ ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು.