ಚಿಕ್ಕೋಡಿ

ಕೈ ಶ್ರೀಕಾಂತ್ ಬಾಲಕೃಷ್ಣ ರಸಾಳೆ ಟ್ರೋಫಿ : 21ರಂದು ಪುರುಷರ ಓಪನ್ ಶೂಟಿಂಗ್ ಬಾಲ್ ಸ್ಪರ್ಧೆ

ಕೈ ಶ್ರೀಕಾಂತ್ ಬಾಲಕೃಷ್ಣ ರಸಾಳೆ ಟ್ರೋಫಿ : 21ರಂದು ಪುರುಷರ ಓಪನ್ ಶೂಟಿಂಗ್ ಬಾಲ್ ಸ್ಪರ್ಧೆ

ಮಾಂಜರಿ 18: ಚಿಕ್ಕೋಡಿ ತಾಲೂಕಿನ ಮಾಂಜರಿ  ಗ್ರಾಮದ ಮಾಂಜರಿ ವಾಲಿಬಾಲ್ ಸಂಘಟನೆ ಮತ್ತು ಮಾಂಜರಿವಾಡಿ ವಾಲಿಬಾಲ್ ಸಂಘಟನೆ ಮಾಂಜರಿ  ವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ  ದಿನಾಂಕ 20 ಮತ್ತು ರವಿವಾರ ದಿನಾಂಕ 21 ಜನವರಿ ರಂದು ಕೈ ಶ್ರೀಕಾಂತ್ ಬಾಲಕೃಷ್ಣ ರಸಾಳೆ ಟ್ರೋಫಿ ಪುರುಷರ ಓಪನ್ ಶೂಟಿಂಗ್ ಬಾಲ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಸತೀಶ್ ಮಗ್ಗೆನವರ್ ತಿಳಿಸಿದರು 

ಅವರು ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ  ಗ್ರಾಮದ ಗ್ರಾಮ ಪಂಚಾಯತಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು ಈ ಸ್ಪರ್ಧೆಯಲ್ಲಿ ಪ್ರಥಮ ಕ್ರಮಾಅಂಕ ವಿಜೇತ ತಂಡಕ್ಕೆ 30,000 2ನೇ  ಕ್ರಮಾಂಕ  20000 ಮೂರನೆಯ ಕಮಾಂಕ ರೂ.10,000 ಸಂಘಗಳಿಗೆ ಬಹುಮಾನ ನೀಡಲಾಗುವುದು ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಹೆಸರಾಂತ ಸಂಘಗಳು ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದರು 


ಸುದ್ದಿ ಓದಿ