ಕಾಡಾಪೂರ: ರೈತ ಸೇವಾ ಸಂಘ ಆರಂಭ
ಚಿಕ್ಕೋಡಿ 06: ರೈತರು ಬೆಳೆದ ಕಾಯಿಪಲ್ಲೆಯನ್ನು ನೇರವಾಗಿ ಮಾರುಕಟ್ಟೆ ಒದಗಿಸಿ ಅವರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ರೈತ ಸೇವಾ ಸಂಘ ಪ್ರಾರಂಭಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರ್ಜುನ ಗುರುನಾಥ ಹೇಳಿದರು.
ಶುಕ್ರವಾರ ತಾಲೂಕಿನ ಕಾಡಾಪೂರ ಗ್ರಾಮದಲ್ಲಿ ಸಮಾನಮನಸ್ಕ ರೈತರು ಸೇರಿ ಪ್ರಾರಂಭಿಸಿರುವ ರೈತ ಸೇವಾ ಸಂಘದ ಪೂಜೆ ಹಾಗೂ ತರಕಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ತಾವು ಬೆಳೆದ ತರಕಾರಿಗಳ ಮಾಹಿತಿಯನ್ನು ಸಹಕಾರಿ ಸಂಘಕ್ಕೆ ತಿಳಿಸಿದಲ್ಲಿ ಅವರ ಜಮೀನಿಗೆ ಹೋಗಿ ವಾಹನದ ಮೂಲಕ ಯೋಗ್ಯ ದರವಿರುವ ಮಾರುಕಟ್ಟೆಗೆ ಕಳಿಸಿ ಅವರಿಗೆ ಸೂಕ್ತ ಬೆಂಬಲ ಬೆಲೆಯು ನೇರವಾಗಿ ಅವರ ಖಾತೆಗೆ ಜಮೆ ಮಾಡುವುದಲ್ಲದೇ ಮಾರುಕಟ್ಟೆಯ ದರವನ್ನು ಅವರ ಮೋಬೈಲ್ಗೆ ಎಸ್ಎಂಎಸ್ ಮೂಲಕ ತಿಳಿಸಲಾಗುವುದು ಎಂದರು.
ಕಾಡಪೂರ ಗ್ರಾಮದ ಸುಮಾರು 100 ಕ್ಕೂ ಹೆಚ್ಚಿನ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಲು ಮುಂದೆ ಬಂದಿದ್ದು ಬರುವ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಅಥವಾ ಬೇರೆ ಗ್ರಾಮಗಳು ರೈತರು ಸಹ ಇದರ ಲಾಭ ಪಡೆದುಕೊಳ್ಳಬಹುದು. ಈ ಸಂಘವು ಯಾವುದೇ ಪಕ್ಷ,ಧರ್ಮ ಎನ್ನದೇ ಕೇವಲ ರೈತರ ಹಿತ ಕಾಪಾಡುವಲ್ಲಿ ಬದ್ಧವಾಗಿದೆ ಎಂದರು.
ರೈತ ಸೇವಾ ಸಂಘ ಕಾಡಾಪುರ ಜ್ಞಾನೇಶ್ವರ ಕೊಳೇಕರ, ಮಿಥುನ್ ಕೋಳಿ, ನಂದು ಶಿರೋಳೆ, ಪ್ರವೀಣ ಕೋರೆ,ರಾಮಾ ಪವಾರ,ಅಶೋಕ ಠುಭಾಕೆ, ಕಿರಣ ಶಿಂದೆ, ಪ್ರಮೋದ ಪವಾರ, ಬಾಳು ದೇಸಾಯಿ, ವಿನೋದ್ ಕೋಳಿ, ರವಿ ಠುಭಾಕೆ, ಮಾರುತಿ ವಡೇರ, ಕಲ್ಲಪ್ಪ ವಡೇರ, ಪವನಕಳ್ಳೆ ರೈತ ಬಂಧುಗಳು ಉಪಸ್ಥಿತರಿದ್ದರು.