ಕಾಡಾಪೂರ: ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಜಯಂತಿ ಆಚರಣೆ
ಲೋಕದರ್ಶನ ವರದಿ
ಚಿಕ್ಕೋಡಿ: ತಾಲೂಕಿನ ಕಾಡಾಪೂರ ಗ್ರಾಮದಲ್ಲಿ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣನ ಜಯಂತಿಯನ್ನು ವಿಜ್ರಂಭನೆಯಿಂದ ಆಚರಿಸಿದರು.
ಗ್ರಾಮದ ಮುಖಂಡರು ಹಾಗೂ ಡಾ, ಪ್ರಭಾಕರ ಕೋರೆ ಅರ್ಬನ ಬ್ಯಾಂಕಿನ ಅಧ್ಯಕ್ಷ ಮಹಾಂತೇಶ ಪಾಟೀಲ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುರುಬ ಸಮಾಜದ ಮುಖಂಡ ಅರ್ಜುನ ಗುರುನಾಥ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಮೊದಲು ರಣ ಕಹಳೆ ಮೊಳಗಿದ್ದು ಕಿತ್ತೂರ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಂದ ಎಂಬುದು ಇತಿಹಾಸದಲ್ಲಿ ಅಜರಾಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರುತಿ ಬೆಳಕೂಡೆ, ಅಶೋಕ ಠುಭಾಕೆ, ಸುರೇಶ ಗುರುನಾಥ, ರವಿ ಠುಭಾಕೆ, ಮಾರುತಿ ನರೋಟೆ, ಖಾನಪ್ಪ ವಡೇರ, ಸಿದ್ದು ರಾಜಾಪೂರೆ, ಬಾಬಾಸಾಹೇಬ ಹುಕ್ಕೇರಿ, ವಿಠ್ಠಲ ನರೋಟೆ, ಹೊನ್ನಸಿದ್ದ ಬತ್ತೆ, ಜಕ್ಕಪ್ಪ ನರೋಟೆ ಮುಂತಾದವರು ಇದ್ದರು.