ಶಿಗ್ಗಾವಿ ಕ್ಷೇತ್ರ ಲಂಚಮುಕ್ತ ಮಾಡಲು ಕೆಆರ್ಎಸ್ ಸಂಕಲ್ಪ: ರವಿ ಕೃಷ್ಣಾರೆಡ್ಡಿ
ಶಿಗ್ಗಾವಿ 08: ಪ್ರಸ್ತುತ ಶಿಗ್ಗಾವಿ ಕ್ಷೇತ್ರದ ಸರ್ಕಾರಿ ಕಛೇರಿಗಳು ಭ್ರಷ್ಟಾಚಾರದಿಂದ ಕೊಳೆತು ನಾರುತ್ತಿದ್ದು ಸ್ವಚ್ಚ ಮಾಡುವ ಹೊಣೆಯನ್ನುಕೆ.ಆರ್.ಎಸ್. ಪಕ್ಷವು ತೆಗೆದುಕೊಂಡಿದೆ ಎಂದು ರಾಜ್ಯಾಧ್ಯಕ್ಷ ರವಿ ಕೃಷ್ಞಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕೆ.ಆರ್.ಎಸ್. ಪಕ್ಷದ ವತಿಯಿಂದ ಆಯೋಜಿಸಿದ್ದ ಲಂಚಮುಕ್ತ ಶಿಗ್ಗಾವಿ ರಾ್ಯಲಿಯಲ್ಲಿ ಮಾತನಾಡಿದಅವರು ಈಗಾಗಲೇ ಈ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಶಿಗ್ಗಾವಿ ಕ್ಷೇತ್ರದ ಮತದಾರರುಕೆ.ಆರ್.ಎಸ್. ಪಕ್ಷವನ್ನು ಬೆಂಬಲಿಸಿದರೆ, ಶಿಗ್ಗಾವಿಯ ಲಂಚಮುಕ್ತವಾಗುವುದು ಮತ್ತು ಸರ್ವತೋಮುಖ ಅಭಿವೃದ್ಧಿ ಹೊಂದುವ ದಿನಗಳು ದೂರವಿಲ್ಲ. ಈಗಾಗಲೇ ನಾವು ಗಣನೀಯ ಪ್ರಮಾಣದಲ್ಲಿ ಜನರ ವಿಶ್ವಾಸಗಳಿಸಿದ್ದು, ಕ್ಷೇತ್ರದ ಸಮಸ್ತ ಜನರ ವಿಶ್ವಾಸ ಗಳಿಸುವುದರಲ್ಲಿ ಯಾವುದೇಅನುಮಾನವಿಲ್ಲ ಎಂದು ಹೇಳಿದರು.
ಹಿರಿಯಚಿಂತಕರು ಹಾಗೂ ಹೋರಾಟಗಾರಎಸ್. ಆರ್. ಹಿರೇಮಠ ಮಾತನಾಡಿಇಂದು ನಿರುದ್ಯೋಗವು ದೇಶದ ದೊಡ್ಡ ಸಮಸ್ಯೆಯಾಗಿದೆ, ಚುನಾವಣೆ ವ್ಯವಸ್ಥೆಯ ಇಂದು ಸಂಪೂರ್ಣವಾಗಿ ಬಲಿಷ್ಠರ ಹಾಗೂ ಹಣವಂತರ ವಶವಾಗಿದೆ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ರವಿ ಕೃಷ್ಣಾರೆಡ್ಡಿಯವರ ನೇತೃತ್ವದ ಕೆ.ಆರ್.ಎಸ್. ಪಕ್ಷವು ನಿರತವಾಗಿದ್ದು ಇಂತಹವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ ಮಾತನಾಡಿರವಿ ಕೃಷ್ಣಾರೆಡ್ಡಿಯವರನ್ನು ಶಿಗ್ಗಾವಿಯ ಮತದಾರರು ಗೆಲ್ಲಿಸುವ ಮೂಲಕ ಇಡೀ ರಾಜ್ಯದ ರಾಜಕಾರಣವನ್ನು ಬದಲಾಗಲು ಕಾರಣರಾಗಬಹುದು, ಆ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು, ಅದರಲ್ಲೂ ಪಟ್ಟಣ ವಾಸಿಗಳು ಮತ್ತುಯುವಕರು ಹೆಚ್ಚಿನ ರೀತಿಯಲ್ಲಿ ಬೆಂಬಲಿಸಬೇಕು ಎಂದು ಹೇಳಿದರು.
ಕೆ.ಆರ್.ಎಸ್ ಪಕ್ಷದ ವೀರ ಸೇನಾನಿಗಳು, ದಂಡ ನಾಯಕರು, ನಾಯಕರು, ಮಹಾನಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.