ಕುಷ್ಟಗಿ

ರಕ್ತದಾನ ಶಿಬಿರಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ ಚಾಲನೆ

ರಕ್ತದಾನ ಶಿಬಿರಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ ಚಾಲನೆ

ಕುಷ್ಟಗಿ 09: ಪ್ರವಾದಿ ಮಹಮ್ಮದ್ ಪೈಗಂಬರ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಹಜರತ್ ಹೈದರ್ ಅಲಿ ಕಮಿಟಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ  ರವಿವಾರ ಬೆಳಗ್ಗೆ ಇಲ್ಲಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರಿ​‍್ಡಸಿದ್ದ ರಕ್ತ ದಾನ ಶಿಬಿರವನ್ನು ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ ದೋಟಿಹಾಳ ಚಾಲನೆ ನೀಡಿದರು.  

ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಶ ಕೆ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಸದಸ್ಯ ಮಹಾಂತೇಶ ಕಲ್ಲಬಾವಿ, ಸದಸ್ಯ ಕಲ್ಲೇಶ   

ತಾಳದ, ಜೆ.ಜೆ ಆಚಾರ್ಯ,  ಆರಿ​‍್ಟ ಸುಭಾನಿ, ರಕ್ತ ಪರೀಕ್ಷೆಕ ಬಾಲಾಜಿ ಬಳಿಗಾರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಿಆರ್ ಓ ದೇವೇಂದ್ರ​‍್ಪ ಹಿಟ್ನಾಳ, ಹಜರತ್ ಹೈದರ್ ಅಲಿ ಕಮಿಟಿ ಅಧ್ಯಕ್ಷ ಮೌಲಾ ಗುಮಗೇರಿ, ಉಪಾಧ್ಯಕ್ಷ ಖಾಜಾ ಕಮ್ಮಾರ, ಪ್ರಧಾನ ಕಾರ್ಯದರ್ಶಿ ಸದ್ದಾಂ ಗುಮಗೇರಿ,  ಸಂಘಟನಾ ಕಾರ್ಯದರ್ಶಿ ಬಾಷಾ ಸವಡಿ, ಮುರ್ತುಜಾ ಬಂಗಾಳಿ,   

ಮೈಬೂಬ ಯಲಿಗಾರ, ಸಾಧೀಕ್ ಮುಲ್ಲಾ, ಶಾಹೀಲ್ ಕಮ್ಮಾರ, ಅಲ್ತಾಪ್ ಲಡ್ಡಿ, ಸಮೀರ್ ತೆಗ್ಗಿಹಾಳ, ಅಲ್ತಾಪ್ ಗೂಡೂರು, ಸದ್ದಾಂ ಬೆಲ್ಲ ಹಾಗೂ ತೆಗ್ಗಿನ ಓಣಿಯ ನಿವಾಸಿಗಳು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 60ಕ್ಕು ಹೆಚ್ಚು ಜನರು ರಕ್ತದಾನ ಮಾಡಿದರು. 


ಸುದ್ದಿ ಓದಿ