ಮೃತ ವಿದ್ಯಾರ್ಥಿ ನವೀನ್ ಕುಟುಂಬದವರಿಗೆ ಸಾಂತ್ವನ
ರಾಣಿಬೆನ್ನೂರ: ಮಾ07 ಉಕ್ರೇನನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರ ಸ್ವಗ್ರಾಮವಾದ ತಾಲೂಕಿನ ಚಳಗೇರಿ ಗ್ರಾಮಕ್ಕೆ ರವಿರಾರ ವಿಪ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಸಲೀಂಅಹ್ಮದ್ ಭೇಟಿ ನೀಡಿ, ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ನಲ್ಲಿ ಮೃತಪಟ್ಟ ನವೀನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಬೇಕೆಂಬ ಒತ್ತಾಯವೂ ಸಹ ಮೃತ ತಂದೆ ತಾಯಿಗೆ ಒತ್ತಾಸೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಾಕಾರವಗಿದೆ ಎಂದರು.
ಕೆಪಿಸಿಸಿ ವತಿಯಿಂದಲೂ ಸಹ ಪಾರ್ಥಿವ ಶರೀರ ತರಲು ಪ್ರಯತ್ನ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಈಗಾಗಲೇ ಚರ್ಚಿಸಲಾಗಿದೆ. ಈಗಾಗಲೇ ಪಾರ್ಥಿವ ಶರೀರ ತಂದರೆ ಅವರ ಕುಟುಂಬ ವರ್ಗದವರು ದುಃಖದಲ್ಲಿಯೂ ಸಹ ಸಂತಸ ಪಡುವರು ಎಂದರು.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನವೀನ ಅವರಿಗೆ ಇಲ್ಲಿನ ಶಿಕ್ಷಣ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿ ವೈದ್ಯಕೀಯ ಸೀಟು ಸಿಗಲಲ್ಲ. ಈ ಕಾರಣದಿಂದಾಗಿ ಉಕ್ರೇನ್ಗೆ ತೆರಳಬೇಕಾಯಿತು ಎಂದು ಅವರ ತಂದೆ ಶೇಖರಗೌಡ ತಾಯಿ ವಿಜಯಲಕ್ಷ್ಮೀ ತಮ್ಮ ನೋವನ್ನು ಸಾಂತ್ವಾನದ ಸಂದರ್ಭದಲ್ಲಿ ಹಂಚಿಕೊಂಡರು ಎಂದು ಸಲೀಂ ಹೇಳಿದರು.
ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವ ರುದ್ರ್ಪ ಲಮಾಣಿ, ಸೋಮಣ್ಣ ಬೇವಿನಮರದ, ಪ್ರಕಾಶಗೌಡ ಪಾಟೀಲ, ಎಂ.ಎಂ.ಹಿರೇಮಠ, ಏಕನಾಥ ಭಾನುವಳ್ಳಿ ಸ್ಭೆರಿದಂತೆ ಮತ್ತಿತರ ಕಾಂಗ್ರೇಸ್ ಪದಾಧಿಕಾರಿಗಳು, ಮುಖಂಡರು ಇದ್ದರು. ಇದಕ್ಕೂ ಮುನ್ನ ಮೃತ ನವೀನ ಭಾವಚಿತ್ರಕ್ಕೆ ಸಲೀಂ ಅಹಮದ್ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.