ರಾಣೆಬೆನ್ನೂರ

ಸಿದ್ಧಾಂತಿ ಕೆ ಎಮ್ ರುದ್ರಯ್ಯ ಇನ್ನಿಲ್ಲ

ಸಿದ್ಧಾಂತಿ ಕೆ ಎಮ್ ರುದ್ರಯ್ಯ ಇನ್ನಿಲ್ಲ

ರಾಣೆಬೆನ್ನೂರು 05:  ಇಲ್ಲಿನ ನಿವೃತ್ತ ಉಪನ್ಯಾಸಕ, ಶಿಕ್ಷಣ ತಜ್ಞ ಆಧ್ಯಾತ್ಮ ಕ್ಷೇತ್ರದ ಮೂಲಕ, ಜನಾನುರಾಗಿಯಾ ಗಿದ್ದ, ಶರಣ ಕೆ. ಎಮ್ ರುದ್ರಯ್ಯ (73)( ಪ್ರಸಾದಿ ಮಠ ) ಅವರು ಇತ್ತೀಚೆಗೆ ನಿಧನ ಹೊಂದಿದರು. ಮೃತ ರು, ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ರುದ್ರಯ್ಯ ಅವರು ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರೂ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾ ಮುಖಿಯಾಗಿದ್ದರು, ಸ್ವತಃ ಕಲಾವಿದರಾಗಿದ್ದ ಅವರು, ಕಲೆ ಸಾಹಿತ್ಯ ಸಂಗೀತ  ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಾರ್ವಜನಿಕ ರಂಗದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಂಡಿದ್ದರು.ತಮ್ಮ ಬದುಕಿನದ್ದಕ್ಕೂ ಧರ್ಮದ ಅನುಯಾಯಿಗಳಾಗಿ, ಹರ,ಗುರು, ಚರಮೂರ್ತಿಗಳ ಸೇವಾ ಪರಂಪರೆಯಲ್ಲಿ ಸಾಗಿದ್ದರು. ವೈಚಾರಿಕ ಹಿನ್ನೆಲೆಯಲ್ಲಿ ಪಾಠ ಪ್ರವಚನ ಬೋಧಿಸುತ್ತಿದ್ದ ರುದ್ರಯ್ಯನವರು ತಮ್ಮ ಜೀವಿತದ ಕೊನೆಯವರೆಗೂ ಸಮಾಜಮುಖಿ ಸೇವೆಯಲ್ಲಿಯೇ ಸಮರ​‍್ಿಸಿಕೊಂಡಿದ್ದರು.ವಿದ್ಯಾರ್ಥಿಗಳ ಪಾಲಿಗೆ ಜ್ಞಾನ ದಾಸೋಹ ನೀಡುತ್ತಿದ್ದ, ಅವರು ಇಂದು ಇಲ್ಲವಾಗಿದ್ದಾರೆ. 


ಸುದ್ದಿ ಓದಿ