ಬೆಳಗಾವಿ

ಕೆಎಲ್‌ಇ ಹೆಲ್ತ್‌ ಗೈಡ್ ಫೋನ್‌-ಇನ್ ಕಾರ್ಯಕ್ರಮ ಆಗಸ್ಟ್‌ 6ರಂದು

ಕೆಎಲ್‌ಇ ಹೆಲ್ತ್‌ ಗೈಡ್ ಫೋನ್‌-ಇನ್ ಕಾರ್ಯಕ್ರಮ ಆಗಸ್ಟ್‌ 6ರಂದು

ಲೋಕದರ್ಶನ ವರದಿ 

ಬೆಳಗಾವಿ, ಆ.5: ಕೆಎಲ್‌ಇ ವೇಣುಧ್ವನಿ 90.4 ಎಫ್‌.ಎಂ. ಕೇಂದ್ರ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆಗಸ್ಟ್‌ 6ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ವಿಶೇಷ ’ಹೆಲ್ತ್‌ ಗೈಡ್‌’ ಫೋನ್‌-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.  

ಕಾರ್ಯಕ್ರಮದಲ್ಲಿ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸೋನಾಲಿ ಬಿಜ್ಜರಗಿ ಭಾಗವಹಿಸಿ, ಸ್ತನ್ಯಪಾನದ ಮಹತ್ವ ಹಾಗೂ ತಾಯಿ-ಮಗುವಿನ ಆರೋಗ್ಯ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.  

ಆಸಕ್ತರು 9019904904 ಸಂಖ್ಯೆಗೆ ಕರೆ ಮಾಡಿ ವೈದ್ಯರೊಂದಿಗೆ ನೇರವಾಗಿ ಮಾತನಾಡಿ ತಮ್ಮ ಆರೋಗ್ಯ ಸಂಬಂಧಿತ ಸಂದೇಹಗಳಿಗೆ ಪರಿಹಾರ ಪಡೆಯಬಹುದು.  ಕೆಎಲ್‌ಇ ವೇಣುಧ್ವನಿ 90.4 ಎಫ್‌.ಎಂ. ರೇಡಿಯೊ ಮೊಬೈಲ್ ಆ್ಯಪ್ನಲ್ಲಿಯೂ ಲಭ್ಯವಿದ್ದು, ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕೇಂದ್ರದ ನಿರ್ದೇಶಕ ಡಾ. ಸುನೀಲ್ ಜಲಾಲಪುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ