ಕೆಎಲ್ಇ ಬಿಸಿಎ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
ಲೋಕದರ್ಶನ ವರದಿ
ಮಾಂಜರಿ 02: ಉದ್ಯೋಗ ಲೋಕಕ್ಕೆ ಲಗ್ಗೆ ಇಟ್ಟ ಅಂಕಲಿಯ ಕೆಎಲ್ಇ ಬಿಸಿಎ ಮಹಾವಿದ್ಯಾಲಯ ವಿದ್ಯಾರ್ಥಿಗಳು: ನೂರಕ್ಕೆ ನೂರು ಪ್ರತಿಶತ ವಿದ್ಯಾರ್ಥಿಗಳು ಕ್ಯಾಂಪಸ್ ಡ್ರೈವ್ನಲ್ಲಿ ಆಯ್ಕೆ ಮಾಡಲಾಯಿತು.
ಶನಿವಾರ ದಿ.2 ಮೇ 2026 ರಂದು ಅಂಕಲಿಯ ಕೆಎಲ್ಇ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕ್ಯಾಂಪಸ್ ಕ್ಯಾಂಪಸ್ ಡ್ರೈವ್ ನಲ್ಲಿ ಟಾಟಾ ಮತ್ತು ಒಳಗೊಂಡು ಅನೇಕ ಕಂಪನಿಗಳು ಆಗಮಿಸಿದ್ದವು. ಇದರಲ್ಲಿ ಕೆಎಲ್ಇ ಬಿಸಿಎ ಮಹಾವಿದ್ಯಾಲಯ ಅಂಕಲಿಯ ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳು ಆಯ್ಕೆಯಾಗುವುದರ ಮೂಲಕ ಪ್ಲೇಸ್ಮೆಂಟ್ ನಲ್ಲಿ ನೂರಕ್ಕೆ ನೂರು ಪ್ರತಿಶತ ಸಾಧನೆಯನ್ನು ಮಾಡಿದ್ದಾರೆ.
ಅಂಕಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕೆಎ??? ಬಿಸಿಎ ಮಹಾವಿದ್ಯಾಲಯ ಅಂಕಲಿ ಪ್ಲೇಸ್ಮೆಂಟ್ ನಲ್ಲಿ ನೂರಕ್ಕೆ ನೂರು ಪ್ರತಿಶತ ಸಾಧನೆಯನ್ನು ಮಾಡುವುದರ ಮೂಲಕ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.