ಕೆ.ಕೆ ಆಂಗ್ಲಮಾಧ್ಯಮ ಶಾಲೆ ಅತ್ಯುತ್ತಮ ಸಾಧನೆ
ಚಿಕ್ಕೋಡಿ 12: ಇಲ್ಲಿನ ಸಿಎಲ್ಇ ಸಂಸ್ಥೆಯ ಕೆ.ಕೆ ಆಂಗ್ಲಮಾಧ್ಯಮ ಶಾಲೆಯ ಸಿಬಿಎಸ್ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ಶಾಲೆಯ ಪ್ರಥಮ ಬ್ಯಾಚನಲ್ಲಿ ಈ ಫಲಿತಾಂಶ ದಾಖಲಾಗಿರುವುದು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಶಾಲೆಯ ಸಮೃದ್ಧಿ ರೆಂಟೆ 552(ಶೇ92) ಪ್ರಥಮ, ಆದರ್ಶ ಕುಮಾಬರ 536(ಶೇ89.33) ದ್ವಿತೀಯ, ಸುಭಾನ ಖಾನಾಪುರೆ 532(88.67) ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೋಪ, ಪ್ರಾಚಾರ್ಯ ಸ್ಮೀತಾ ಶಿಂಧೆ ಶ್ಲಾಘಿಸಿದ್ದಾರೆ.