ಹಿರಿಯ ನಾಯಕ ಏಕನಾಥ್ ಖಡ್ಸೆ ಬಿಜೆಪಿ ತ್ಯಜಿಸಿದ್ದಾರೆ; ಜಯಂತ್ ಪಾಟೀಲ್
ಮುಂಬೈ, ಅ 21 : ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿ ಪಿ) ಸೇರಲು, ಹಿರಿಯ ನಾಯಕ ಏಕ ನಾಥ್ ಖಡ್ಸೆ ಬಿಜೆಪಿಯನ್ನು ತ್ಯಜಿಸಿದ್ದಾರೆ ಎಂದು ಎನ್ ಸಿ ಪಿ ನಾಯಕ ಜಯಂತ್ ಪಾಟೀಲ್ ಬುಧವಾರ ಹೇಳಿದ್ದಾರೆ. ಮೇಲ್ವರ್ಗಗಳ ಪ್ರಾಬಲ್ಯದ ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿರುವ ಖಡ್ಸೆ ಜಲಗಾನ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಕಳೆದ ಮೂವತ್ತು ವರ್ಷಗಳಿಂದ ಶಾಸಕರಾಗಿದ್ದಾರೆ.ಒಂದು ಕಾಲದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರಿಗಣಿಸಲಾಗಿದ್ದ ಏಕನಾಥ್ ಖಡ್ಸೆ ಅವರ ಸೊಸೆ ರಕ್ಷಾ ಬಿಜೆಪಿ ಸಂಸದೆಯಾಗಿದ್ದಾರೆ. 1980ರಲ್ಲಿ ಬಿಜೆಪಿ ಕಾರ್ಯಕರ್ತರಾಗಿ ಸಕ್ರೀಯ ರಾಜಕೀಯ ಪ್ರವೇಶಿಸಿದ್ದ ಖಡ್ಸೆ, ಉತ್ತರ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲೇವಾ ಸಮುದಾಯಕ್ಕೆ ಸೇರಿದ ಖಡ್ಸೆ ತಮ್ಮನ್ನು ಹಿಂದುಳಿದ ವರ್ಗಗಳ ನಾಯಕ ಎಂಬು ಬಿಂಬಿಸಿಕೊಂಡಿದ್ದಾರೆ.ಭ್ರಷ್ಟಾಚಾರ ಆರೋಪದ ಮೇಲೆ 2016ರಲ್ಲಿ ದೇವೇಂದ್ರ ಫಡ್ನವೀಸ್ಸಂಪುಟದಿಂದ ರಾಜೀನಾಮೆ ನೀಡುವಂತೆ ಮಾಡಿದ್ದ ನಂತರ ಖಡ್ಸೆ ಬಿಜೆಪಿಯೊಳಗೆ ಅಸಮಧಾನದಿಂದ ಕುದಿಯುತ್ತಿದ್ದಾರೆ. ಈ ಮೊದಲು ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್, ವಿರೋಧ ಪಕ್ಷದ ನಾಯಕರಾಗಿ ಬಿಜೆಪಿ ಬಲಪಡಿಸಲು ಪ್ರಮುಖ ಪಾತ್ರ ವಹಿಸಿದ್ದ ಖಡ್ಸೆಅವರನ್ನು ಬಿಜೆಪಿ ಕಡೆಗಣಿಸಿದೆ ಎಂದು ಹೇಳಿದ್ದರು.