ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕರ ಸನ್ಮಾನ ಸಮಾರಂಭ
ಶಿಗ್ಗಾವಿ 05: ಶಿಗ್ಗಾವಿ ಪಟ್ಟಣದಲ್ಲಿ ಕೆಸಿಸಿ ಬ್ಯಾಂಕ್ ಶಾಖೆಯನ್ನು ಸ್ವಂತ ಕಟ್ಟಡವನ್ನು ಹೊಂದಲು ಸ್ಥಳಿಯ ಎಪಿಎಂಸಿ ಯಲ್ಲಿ ನನ್ನ ಅಧ್ಯಕ್ಷ ಇದ್ದಾಗ ಜಾಗೆಯನ್ನು ನೀಡಿದ್ದು ಇದರಿಂದ ಬ್ಯಾಂಕ್ ಶಾಖೆಗೆ ಹಾಗೂ ರೈತರಿಗೆ ಅನುಕುಲವಾಗಿದೆ ಎಚಿದು ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣಾ ಸಾತಣ್ಣವರ ಹೇಳಿದರು.
ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿದ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅಂದು ಕೆಸಿಸಿ ಬ್ಯಾಂಕ್ ಶಾಖೆ ಕಟ್ಟಡವನ್ನು ನೀಡಲು ಎಪಿಎಂಸಿ ಸಮಿತಿಯಿಂದ ಜಾಗೆ ನೀಡಿದ್ದರಿಂದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅನುದಾನವನ್ನು ನೀಡಿದ ಫಲವಾಗಿ ಇಂದು ಬಾಡಿಗೆ ಕಟ್ಟಡದಲ್ಲಿದ್ದ ಕೆಸಿಸಿ ಬ್ಯಾಂಕು ಇಂದು ಸ್ವಂತ ಕಟ್ಟಡದಲ್ಲಿ ಇರಲು ಸಾಧ್ಯವಾಗಿದೆ ಎಂದು ಹೇಳಿದರು.
ಧಾರವಾಡ ಕೆಸಿಸಿ ಬ್ಯಾಂಕ್ ನೂತನ ನಿರ್ದೇಶಕ ಸಂಗಮೇಶ ಕಂಬಾಳಿಮಠ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದವರು ನಮ್ಮ ಗ್ರಾಮದಿಂದ ನನಗೆ ಮತವನ್ನು ಹಾಕುವದರ ಜೊತೆಗೆ ನನ್ನ ಮೇಲೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚ್ಯುತಿ ಬಾರದಂಗೆ ಕಾರ್ಯನಿರ್ವಹಿಸುವದರ ಜೋತೆಗೆ ಸರಕಾರದ ಯೋಜನೆಯನ್ನು ತಮಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು. ವಿವಿಧ ಗಣ್ಯರನ್ನ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಪಕ್ಕೀರಯ್ಯ ಹಿರೇವ್ಮಠ ಅಬ್ದುಲ್ಸಾಬ ಕಳಸಗೇರಿ, ಅರ್ಜುನಪ್ಪ ಸಂದಿಮನಿ, ಚನ್ನಪ್ಪ ಕುಂದಗೋಳ, ಫಯಾಜ ಸವಣೂರ, ಖಾಶೀಂಸಾಬ ಪಠಾಣ, ರಮೇಶ ಸಾತಣ್ಣವರ, ಗುರ್ಪ ಶೆಟ್ಟರ, ಭರವ್ಮಜ್ಜ ದ್ಯಾವಣ್ಣವರ, ಬಸಪ್ಪ ಮಲ್ಲೂರ, ಕೃಷ್ಣಪ್ಪ ಬಡಿಗೇರ, ನಾಗಪ್ಪ ಅದೃಶಪ್ಪನವರ, ಚೆನ್ನಬಸಪ್ಪ ಹಡಪದ, ಬಸವರಾಜ ಬಾರ್ಕಿ, ಮಾಬೂಸಾಬ ದೀವಾನದಾರ, ಚಿದಾನಂದ ಶಿಗ್ಗಾವಿ, ನೀಲಪ್ಪ ತಳವಾರ, ವಿರುಪಾಕ್ಷಪ್ಪ ನೇಕಾರ, ಸೋಮವ್ವ ಪೋಲಿಸ್ಪಾಟೀ, ಯಲ್ಲವ್ವ ಹಡಪದ, ಸಂಘದ ಕಾರ್ಯನಿರ್ವಾಹಕರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯುವಕರು ಕಾರ್ಯಕ್ರಮದಲ್ಲಿದ್ದರು.